ವಿರಾಜಪೇಟೆ ಏ.6 : ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಇದ್ದ ಮೀಸಲಾತಿಯನ್ನು ಸರ್ಕಾರ ರದ್ದು ಮಾಡಿದ ನಿರ್ಧಾರ ಸಂವಿಧಾನ ವಿರೋಧಿಯಾಗಿದೆ ಎಂದು ನಾಲ್ಕುನಾಡು ಮುಸ್ಲಿಂ ಒಕ್ಕೂಟದ ಪ್ರಮುಖ, ಅಲ್ಪಸಂಖ್ಯಾತ ಮುಖಂಡ ಕುಂಜಿಲದ ನಾಸರ್ ಮಕ್ಕಿ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯ ಸರ್ಕಾರ ಪರಿಷ್ಕೃತ ಮೀಸಲಾತಿ ನೀತಿಯಲ್ಲಿ ಮುಸ್ಲಿಮರಿಗಿದ್ದ ಶೇ.4 ಮೀಸಲಾತಿಯನ್ನು ರದ್ದು ಮಾಡಿರುವುದು ಜನದ್ರೋಹದ ಕ್ರಮವಾಗಿದೆ. ಮುಸ್ಲಿಮರಿಗೆ 2(ಬಿ) ಪ್ರವರ್ಗದಡಿ ಇದ್ದ ಮೀಸಲಾತಿಯನ್ನು ರದ್ದು ಮಾಡಿ ಒಕ್ಕಲಿಗರಿಗೆ ಮತ್ತು ಪಂಚಮಸಾಲಿ ಸಮುದಾಯಕ್ಕೆ ಹಂಚಿರುವುದು ಅತ್ಯಂತ ಅವೈಜ್ಞಾನಿಕ. ಇದು ಸಮಾಜದಲ್ಲಿ ಕೆಟ್ಟ ಸಂದೇಶ ರವಾನೆಯಾದಂತಾಗಿದೆ ಎಂದರು.
ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ರಾಜಕೀಯ ಪ್ರೇರಿತವಾಗಿ ಕೈಗೊಂಡ ನಿರ್ಧಾರ ಇದಾಗಿದೆ ಎಂದು ಆರೋಪಿಸಿದ ಅವರು, ಮುಸ್ಲಿಂ ಸಮುದಾಯಕ್ಕೆ ಇದ್ದ ಮೀಸಲಾತಿ ತೆಗೆದಿರುವುದು ಎಂದಿಗೂ ಒಪ್ಪಲು ಸಾಧ್ಯವಿಲ್ಲ. ಮುಸ್ಲಿಂ ಸಮುದಾಯದಲ್ಲೂ ಕಡು ಬಡವರು ಮತ್ತು ಬಡವರು ಇದ್ದಾರೆ. ಮುಸ್ಲಿಮರ ಮೀಸಲಾತಿಯನ್ನು ರದ್ದುಗೊಳಿಸಿರುವುದರಿಂದ ಸಮುದಾಯದ ಪ್ರತಿಭಾವಂತರು ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾಗಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸರಕಾರ ತೆಗೆದು ಹಾಕಿರುವ ಮೀಸಲಾತಿಯನ್ನು ಮತ್ತೆ ಪುನಸ್ಥಾಪಿಸಬೇಕು. ಇದಕ್ಕಾಗಿ ಕೊಡಗಿನ ಸಮಾನ ಮನಸ್ಕ ವಿವಿಧ ಸಂಘಟನೆಗಳನ್ನು ಒಳಗೊಂಡ ಹೊರಟ ಸಮಿತಿಯನ್ನು ಕೂಡಲೇ ರಚಿಸಿ ಚುನಾವಣೆ ನಂತರ ಬೃಹತ್ ಪ್ರಮಾಣದ ಸಾಮೂಹಿಕ ಹೋರಾಟ ಆರಂಭಿಸಲಾಗುವುದು ಎಂದು ನಾಸರ್ ಮಕ್ಕಿ ತಿಳಿಸಿದರು.
Breaking News
- *ಯುವನಿಧಿ ಯೋಜನೆ ಹೆಸರು ನೋಂದಣಿಗೆ ಮನವಿ*
- *ಮಡಿಕೇರಿಯಲ್ಲಿ ಸಹಕಾರ ಸಪ್ತಾಹ : ಸಹಕಾರ ಸಂಘಗಳ ಬಲವರ್ಧನೆಗೆ ಮತ್ತಷ್ಟು ಶ್ರಮಿಸಿ : ಎಂ.ಸಿ.ನಾಣಯ್ಯ ಸಲಹೆ*
- *ಗೋಣಿಕೊಪ್ಪಲಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ*
- *ಶ್ರೀ ಕೇತ್ರ ಧರ್ಮಸ್ಥಳದಿಂದ ಕೊಡಗಿನ ಸರ್ಕಾರಿ ಶಾಲೆಗಳಿಗೆ 72 ಲಕ್ಷ ಮೌಲ್ಯದ ಡೆಸ್ಕ್- ಬೆಂಚು ವಿತರಣೆ*
- *ಪೊನ್ನಂಪೇಟೆ : ಕೂರ್ಗ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ “ಅವಿನ್ಯಂ” ವಿದ್ಯಾರ್ಥಿ ಒಕ್ಕೂಟದ ಪದಗ್ರಹಣ*
- *ವಿಹೆಚ್ಪಿಯಿಂದ ನ.15 ರಂದು ಭಾಗಮಂಡಲದಲ್ಲಿ ಕಾವೇರಿ ಆರತಿ*
- *ನೆಹರೂ ಅವರು ಆಧುನಿಕ ಭಾರತದ ಶಿಲ್ಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ*
- *ಗೋಣಿಕೊಪ್ಪಲಿನಲ್ಲಿ ಏಡ್ಸ್ ಕುರಿತು ಜಾಗೃತಿ : ಜಾಗೃತಿಯಿಂದ ಮಾತ್ರ ಏಡ್ಸ್ ತಡೆಗಟ್ಟಲು ಸಾಧ್ಯ : ಡಾ. ಎಂ.ಬಿ.ಕಾವೇರಿಯಪ್ಪ*
- *ಕಾಂಗ್ರೆಸ್ ಆರೋಪದಲ್ಲಿ ಸತ್ಯಾಂಶಗಳಿಲ್ಲ : ಕೊಡಗು ಬಿಜೆಪಿ ಅಸಮಾಧಾನ*
- *ಮಡಿಕೇರಿ : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದಿಂದ ಗಿಡ ನೆಡುವ ಕಾರ್ಯಕ್ರಮ*