ಚೆಯ್ಯಂಡಾಣೆ ಏ.6 : ಚೆಯ್ಯಂಡಾಣೆ ವ್ಯಾಪ್ತಿಯಲ್ಲಿ ಗುರುವಾರ ಮಧ್ಯಾಹ್ನ ಗುಡುಗು ಸಹಿತ ಮಳೆಯಾಗಿದೆ.
ಗ್ರಾಮದ ನರಿಯಂದಡ, ಚೇಲಾವರ,ಕರಡ ಗ್ರಾಮದಲ್ಲಿ ಸಾದಾರಣ ಮಳೆಯಾಗಿದ್ದು ಬಿಸಿಲಿನಿಂದ ಒಣಗುತ್ತಿದ್ದ ಗಿಡಗಳಿಗೆ ತಂಪೆರಗಿದಂತಿದೆ.
ವರ್ಷದ ಮೊದಲ ಮಳೆ ಸುರಿದಿದ್ದು, ಕೊಡಗು ಜಿಲ್ಲೆಯ ಹಲವೆಡೆ ಮೋಡ ಮುಸುಕಿದ ವಾತಾವರಣ ಕಂಡು ಬಂದಿದೆ.
ವರದಿ : ಅಶ್ರಫ್









