ಮಡಿಕೇರಿ ಏ.7 : ನಗರದ ಬಾಲಭವನದ ಮಕ್ಕಳಿಗೆ ಇನ್ನರ್ ವೀಲ್ ಸಂಸ್ಥೆಯಿಂದ ದಂತ ತಪಾಸಣೆ ಮತ್ತು ಚಿಕಿತ್ಸೆಯನ್ನು ಉಚಿತವಾಗಿ ಕೈಗೊಳ್ಳಲಾಯಿತು.
ಇನ್ನರ್ ವೀಲ್ ಸದಸ್ಯೆ ದಂತ ವೈದ್ಯೆ ಡಾ ವಿ. ದೀಪಾ ಅವರು ಬಾಲಭವನದ ಮಕ್ಕಳ ದಂತ ಆರೋಗ್ಯದ ತಪಾಸಣೆ ನಡೆಸಿ ಅಗತ್ಯವಿದ್ದವರಿಗೆ ಚಿಕಿತ್ಸೆ ನೀಡಿದರು. ದಂತ ಸಂರಕ್ಷಣೆಯ ಬಗ್ಗೆ ಸೂಕ್ತ ಮಾಹಿತಿಯನ್ನೂ ಡಾ.ದೀಪಾ ನೀಡಿದರು.
ಇನ್ನರ್ ವೀಲ್ ಅಧ್ಯಕ್ಷೆ ಡಾ.ರೇಣುಕಾ ಸುಧಾಕರ್, ಕಾಯ೯ದಶಿ೯ ಲಲಿತಾ ರಾಘವನ್, ಸದಸ್ಯರಾದ ಉಮಾಗೌರಿ, ಮಲ್ಲಿಗೆ ಪೈ, ಶಪಾಲಿ ರೈ ಮತ್ತು ನಮಿತಾ ರೈ ಪಾಲ್ಗೊಂಡಿದ್ದರು.










