ನಾಪೋಕ್ಲು ಏ.8 : ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಭಕ್ತ ಜನಸಂಘದ ವತಿಯಿಂದ ಮಳೆಗಾಗಿ ಪರ್ಜನ್ಯ ಹೋಮ ನಡೆಯಿತು.
ಈ ಸಂದರ್ಭ ಅಖಿಲ ಕೊಡವ ಸಮಾಜದ ಅಧ್ಯಕ್ಷರು ಹಾಗೂ ದೇವತಕ್ಕರಾದ ಪರದಂಡ ಸುಮನ್ ಸುಬ್ರಮಣಿ ಮಾತನಾಡಿ, ಜಿಲ್ಲೆಯ ಜನರ ಶಾಂತಿ ಸುಭಿಕ್ಷೆಗಾಗಿ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಪರ್ಜನ್ಯ ಹೋಮ ನೆರವೇರಿಸಲಾಗಿದೆ.
ಜಿಲ್ಲೆಯ ಎಲ್ಲೆಡೆ ಮಳೆಯಾಗಬೇಕು. ಸಮೃದ್ಧಿ ನೆಲೆಸೆಬೇಕು ಎಂಬ ಆಕಾಂಕ್ಷೆಯೊಂದಿಗೆ ತಕ್ಕಮುಖ್ಯಸ್ಥರು ಒಟ್ಟಾಗಿ ದೇವನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಸಂಕಲ್ಪ ಕೈಗೊಂಡಾಗಿನಿಂದ ಅಲ್ಲಲ್ಲಿ ಮಳೆ ಬರಲು ಆರಂಭಿಸಿದೆ ಎಂದರು.
ಪುತ್ತೂರಿನ ತಂತ್ರಿ ಗಿರೀಶ್ ಭಟ್ ನೇತೃತ್ವದಲ್ಲಿ ಮುಖ್ಯ ಅರ್ಚಕ ಕುಶಭಟ್, ಶ್ರೀಕಾಂತ್ ಹಾಗೂ ಶ್ರೀನಿವಾಸ್ ಪರ್ಜನ್ಯ ಹೋಮ ಹಾಗೂ ಪೂಜಾ ವಿಧಿವಿಧಾನಗಳು ನೆರವೇರಿತು.
ಈ ಸಂದರ್ಭ ಭಕ್ತ ಜನಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ಕಲಿಯಂಡ ಹ್ಯಾರಿ ಮಂದಣ್ಣ, ಪರದಂಡ ಡಾಲಿ, ಪ್ರಹ್ಲಾದ, ವಿಠಲ, ಸದಾ ನಾಣಯ್ಯ, ಜೋಯಪ್ಪ, ಶಂಭು ನಂಜಪ್ಪ, ಪಾಡಂಡ ನರೇಶ್, ಕೇಟೋಳಿರ ಕುಟ್ಟಪ್ಪ, ಕಣಿಯರ ನಾಣಯ್ಯ, ಕಲಿಯಂಡ ರಾಜ, ಕೋಡಿಮಣಿಯಂಡ ಸುರೇಶ್, ಕಂಬೇಯಂಡ ಪೊನ್ನು, ಕಾಟುಮಣಿಯಂಡ ತಮ್ಮಯ್ಯ, ಪರದಂಡ ಬೋಪಣ್ಣ, ಪಾರುಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಪ್ಪ, ರೋಷನ್, ಸಾಬು, ಅವಿನ್ ಇನ್ನಿತರರು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ