ಮಡಿಕೇರಿ ಏ.8 : ಕ್‌ಗ್ಗಟ್ಟ್‌ನಾಡ್ ಹಿರಿಯ ನಾಗರಿಕ ವೇದಿಕೆ ಮತ್ತು ನಿನಾದ ವಿದ್ಯಾಸಂಸ್ಥೆ ಸಹಯೋಗದಲ್ಲಿ ಪೊನ್ನಂಪೇಟೆಯಲ್ಲಿ ಕೊಡವ ಭಾಷಿಕ ಜನಾಂಗಗಳಿಗೆ ಆಯೋಜಿಸಿದ್ದ ’ಉಮ್ಮತ್ ಬೊಳಕ್’ ಕಾರ್ಯಕ್ರಮದಲ್ಲಿ ಮಹಿಳೆಯರು ಉಮ್ಮತ್ತಾಟ್, ಪುರುಷರು ಬೊಳಕಟ್ ಸ್ಪರ್ಧೆಯಲ್ಲಿ ಪಾಲ್ಗಗೊಂಡು ಸಂಸ್ಕೃತಿಕ ಅನಾವರಣಗೊಳಿಸಿದರು.
ಪೊನ್ನಂಪೇಟೆ ನಿನಾದ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡವ ಸೀರೆ, ಪತ್ತಾಕ್, ಜೋಮಾಲೆಯಲ್ಲಿ ಮಹಿಳೆಯರು ಕಂಗೊಳಿಸಿದರು.
ಪುರುಷರು ಕುಪ್ಯಚೇಲೆ, ಪೀಚೆಕತ್ತಿ ತೊಟ್ಟು ಬೊಳಕಾಟ್ ಪ್ರದರ್ಶನ ನೀಡಿದರು. ಚೆಕ್ಕೇರ ಪಂಚಮ್ ತ್ಯಾಗರಾಜ್ ಅವರಿಂದ ಕೊಡವ ಹಾಡು ಮೂಡಿ ಬಂತು.
ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಎಂ.ಮೋಟಯ್ಯ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಉಮ್ಮತ್ತಾಟ್ ಎಂಬುವುದು ಕೊಡವ ಜಾನಪದ ನೃತ್ಯವಾಗಿದೆ. ಉಮ್ಮತ್ ಎಂದರೆ ಹೂವಿನ ಹೆಸಳಿನಂತಿರುವ ತಾಳದಲ್ಲಿ ಹೆಜ್ಜೆಗೆ ತಕ್ಕವಾಗಿ ಬಡಿದುಕೊಂಡು ಕುಣಿಯುವ ವಿಶಿಷ್ಟ ಕಲೆಯಾಗಿದೆ. ತಾಳಕ್ಕೆ ತಕ್ಕ ಹೆಚ್ಚೆ ಈ ಕಲೆಯ ವಿಶೇಷತೆಯಲ್ಲೊಂದು ಎಂದರು.
ಇಂತಹ ನೃತ್ಯ ಕಲೆಯನ್ನು ಪೋಷಿಸುವುದು ಎಲ್ಲರ ಜವಾಬ್ದಾರಿ. ಸಂಸ್ಕೃತಿ, ನೀತಿಯ ನಡೆ ಉಳಿಯಲು ಆಚರಣೆ ಮುಖ್ಯವಾಗುತ್ತದೆ. ಇಂತಹ ಕಲೆಗೆ ಪ್ರೋತ್ಸಾಹ ನೀಡುತ್ತಿರುವುದು ಮೆಚ್ಚುಗೆ ಕಾರ್ಯವಾಗಿದೆ. ಮಕ್ಕಳಲ್ಲಿ ಸಂಸ್ಕೃತಿ ಪಾಲನೆಗೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
ನಿನಾದ ವಿದ್ಯಾಸಂಸ್ಥೆಯ ಅಧ್ಯಕ್ಷೆ ಚೆಂದೀರ ನಿರ್ಮಿಲಾ ಬೋಪಣ್ಣ ಮಾತನಾಡಿ, ಒಂದು ದಶಕದ ಹಿಂದೆ ಉಮ್ಮತ್ತಾಟ್ ಮತ್ತು ಬೊಳಕಾಟ್ ಕಲೆಗೆ ಪ್ರೋತ್ಸಾಹಿಸಲು ಕೌಟುಂಬಿಕ ಸ್ಪರ್ಧೆಯಾಗಿ ಅಚರಿಸಿಕೊಂಡು ಬರಲಾಗುತ್ತಿದ್ದು, ಕಲಾವಿದರ ಕೊರತೆಯಿಂದ ಬೊಳಕಾಟ್ ತಂಡವನ್ನು ಗ್ರಾಮದ ಹೆಸರಿನಲ್ಲಿ ನಡೆಸಲಾಗುತ್ತಿದೆ. ಉಮ್ಮತ್ತಾಟ್ ಕಲೆಗೆ ಪ್ರೋತ್ಸಾಹಿಸಲು ಕೌಟುಂಬಿಕ ಸ್ಪರ್ಧೆಯಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ಕಲಾವಿದರ ಕೊರತೆಯಿಂದ ಬೊಳಕಾಟ್ ತಂಡವನ್ನು ಗ್ರಾಮದ ಹೆಸರಿನಲ್ಲಿ ನಡೆಸಲಾಗುತ್ತಿದೆ ಎಂದರು.
ವೇದಿಕೆ ಸ್ಥಾಪಕ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಹಿರಿಯರಾದ ಚೆಕ್ಕೇರ ಸನ್ನಿ ಸುಬ್ಬಯ್ಯ, ಅಧ್ಯಕ್ಷ ಕೊಟ್ಟ್‌ಕತ್ತಿರಾ ಪಿ.ಸೋಮಣ್ಣ, ಉಪಾಧ್ಯಕ್ಷ ಮಂಡೇಚಂಡ ಪಿ.ಗಣಪತಿ, ಕಾರ್ಯದರ್ಶಿ ಚೇಂದೀರ ಎಂ.ಬೋಪಣ್ಣ, ಖಜಾಂಚಿ ಐನಂಡ ಕೆ.ಮಂದಣ್ಣ, ಜಂಟಿ ಕಾರ್ಯದರ್ಶಿ ದೇಯಂಡ ಎಂ.ಕಾವೇರಮ್ಮ ಇದ್ದರು.