ಮಡಿಕೇರಿ ಏ.8 : ಕೊಡವ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ತ್ರಿವೇಣಿ ಪೊಮ್ಮಕ್ಕಡ ಕೂಟ ಅಸ್ತಿತ್ವಕ್ಕೆ ಬಂದಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲಿದೆ ಎಂದು ಕೂಟದ ಅಧ್ಯಕ್ಷೆ ಕಿಕ್ಕೇರಿಯಂಡ ಲೀಲಾ ಅಯ್ಯಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.11 ರಂದು ತ್ರಿವೇಣಿ ಪೊಮ್ಮಕ್ಕಡ ಕೂಟವನ್ನು ಅಸ್ತಿತ್ವಕ್ಕೆ ತರಲಾಗಿದೆ. ಸುಮಾರು 19 ಸದಸ್ಯರಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಲಾಗಿದೆ. ನೊಂದ ಕೊಡವರಿಗೆ ಸಹಾಯ ಮಾಡುವುದು, ಕಡು ಬಡತನದಲ್ಲಿರುವರಿಗೆ ಸಹಾಯ, ಕಾನೂನು ಅರಿವು, ಇತ್ಯಾದಿ ಸೇವೆಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆಕಾಶವಾಣಿಯಲ್ಲಿ ಕೊಡವ ಸಿರಿ ಮತ್ತು ಮಹಿಳಾ ಲೋಕಾದಲ್ಲಿ ವಿವಿಧ ಕಾರ್ಯಕ್ರಮ ನೀಡುವುದು, ಕಡುಬಡವ ಕೊಡವ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುವುದು, ಮದುವೆಯ ನಂತರ ಕಿರುಕುಳಕ್ಕೆ ಒಳಗಾದ ಮಹಿಳೆಗೆ ಸಾಂತ್ವಾನ ಹೇಳುವುದು ಸೇರಿದಂತೆ ಇತ್ಯಾದಿ ಸೇವೆಗಳನ್ನು ಮಾಡಲಾಗುವುದು ಎಂದು ತಿಳಿಸಿದ ಅವರು, ಹೆಚ್ಚಿನ ಮಾಹಿತಿಗಾಗಿ 9972375541, 9686092250 ಸಂಪರ್ಕಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಬೊಪ್ಪಂಡ ಸರಳ ಕರುಂಬಯ್ಯ, ಕಾರ್ಯದರ್ಶಿ ಮಲ್ಚೀರ ಯಶೋಧ ದೇವಯ್ಯ, ಸದಸ್ಯರಾದ ಕೂಪದಿರ ಜೂನಾ ವಿಜಯ್, ಉಡುವೇರ ರೇಖಾ ರಘು ಉಪಸ್ಥಿತರಿದ್ದರು.