ಸೋಮವಾರಪೇಟೆ ತಾಲ್ಲೂಕಿನ ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮದಿಂದ ಕೆರೆಕೊಪ್ಪ ಮಾರ್ಗವಾಗಿ ನಗರಳ್ಳಿ ಮತ್ತು ಶಾಂತಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು ಭಾನುವಾರ ಗ್ರಾಮಸ್ಥರು ಶ್ರಮದಾನದ ಮೂಲಕ ರಸ್ತೆ ಗುಂಡಿ ಮುಚ್ಚಿದರು.
ಈ ರಸ್ತೆಯು ಮಲ್ಲಳ್ಳಿ ಜಲಪಾತ, ಪುಷ್ಪಗಿರಿ ಬೆಟ್ಟವನ್ನು ತಲುಪಲು ಹತ್ತಿರದ ಮಾರ್ಗವಾಗಿದ್ದು ಅತೀ ಹೆಚ್ಚು ಪ್ರವಾಸಿಗರ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿರುವ ಕಾರಣದಿಂದ ರಸ್ತೆಯನ್ನು ಗ್ರಾಮಸ್ಥರೇ ಶ್ರಮದಾನದ ಮೂಲಕ ಗುಂಡಿ ಮುಚ್ಚಿದರು.
ಶ್ರಮದಾನದಲ್ಲಿ ಯು.ಕೆ.ಸೋಮಶೇಖರ್, ಸಿ.ಕೆ.ನಾಗರಾಜ್, ಕೆ.ಕೆ.ಲಕ್ಷ್ಮೀಕಾಂತ ಕೆ,ಡಿ.ಗಿರೀಶ್, ಸಿ.ಸಿ.ದಯಾನಂದ, ಪ್ರದೀಪ್ ಕುಮಾರ್, ಗಣೇಶ್, ದಿನೇಶ್ ಭಾಗವಹಿಸಿದ್ದರು.








