ಸುಂಟಿಕೊಪ್ಪ ಏ.10 : ಯೇಸುಕ್ರಿಸ್ತರ ಪುನರುತ್ಥಾನದ ಪಾಸ್ಕಕಾಲದ (ಈಸ್ಟರ್) ಹಬ್ಬವನ್ನು ಸುಂಟಿಕೊಪ್ಪ ದೇವಾಲಯದ ವತಿಯಿಂದ ಸಂತ ಮೇರಿ ಶಾಲಾವರಣದಲ್ಲಿ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಸಂತಮೇರಿ ಸಂಭಾಗಣದಲ್ಲಿ ಯೇಸು ಕ್ರಿಸ್ತರು ಮಾನವರ ಪಾಪಕ್ಕಾಗಿ ಶಿಲುಬೆಯ ಮರದಲ್ಲಿ ಮರಣವನ್ನಾಪ್ಪಿದ್ದು, 3ನೇ ದಿನ ಸಮಾಧಿಯಿಂದ ಪುನರುತ್ಥಾನಗೊಂಡಿರುವುದನ್ನು ಕ್ರೈಸ್ತರು ಭಾಂದವರು ಪಾಸ್ಕ ಕಾಲದ (ಈಸ್ಟರ್) ಹಬ್ಬವನ್ನು ಆಚರಿಸುವುದು ವಾಡಿಕೆಯಾಗಿದೆ.
ಸಂತ ಮೇರಿ ಶಾಲಾವರಣದಲ್ಲಿ ಮೈಸೂರು ಕೇತ್ರದ ಕೋಶಾಧಿಕಾರಿ ರೇ. ಫಾ. ಜೇಮ್ಸ್ ಡೊಮಿನಿಕ್ ಸಂತ ದೇವಾಲಯದ ಧರ್ಮಗುರುಗಳಾದ ಪಾಧರ್ ಅರುಳ್ ಸೇಲ್ವಕುಮಾರ್ ಅವರು ನೂತನ ಬೆಂಕಿಯನ್ನು ಆರ್ಶಿವಚಿಸಿ, ಜೇನುಮೇಣದಿಂದ ತಯಾರಿಸಲಾದ ದೊಡ್ಡ ಮೊಂಬತ್ತಿಯನ್ನು ಆರ್ಶಿವಚಿಸಿ ಸಂತ ಮೇರಿ ಶಾಲಾವರಣದಿಂದ ಅದನ್ನು ಬೆಳಗಿಸಿಕೊಂಡು ಭಕ್ತಾಧಿಗಳೊಂದಿಗೆ ಮೆರವಣಿಗೆಯೊಂದಿಗೆ ಪೀಠದಲ್ಲಿ ತಂದು ಗುರುಗಳು ಪ್ರತಿಷ್ಠಾಪಿಸಿದರು.
ನಂತರ ಪ್ರಾರ್ಥನಾ ಕೂಟ ಹಾಗೂ ಆಡಂಬರ ದಿವ್ಯ ಬಲಿಪೂಜೆ ನಡೆಯಿತು. ಇದೇ ಸಂದರ್ಭ ಪ್ರಭು ಕ್ರಿಸ್ತರ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಬಲಿಪೂಜೆಯನ್ನು ಸಮರ್ಪಿಸಿದರು.
ಚಾಲ್ರ್ಸ್ ಸಂತ ಕ್ಲಾರ ಕನ್ಯಾಸ್ತ್ರೀ ಕಾನ್ವೆಂಟಿನ ಕನ್ಯಾಸ್ತ್ರೀಯರು, ಗಾಯನ ವೃಂದದೊಂದಿಗೆ ನೂರಾರು ಸಂಖ್ಯೆಯಲ್ಲಿ ನೇರದಿದ್ದ ಭಕ್ತಾಧಿಗಳು ದೇವಾಲಯದಲ್ಲಿ ಪುನರ್‍ತ್ಥಾನದ ಆಡಂಬರ ಬಲಿಪೂಜೆ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡು ನಂತರ ಪ್ರಭು ಯೇಸು ಕ್ರಿಸ್ತರ ಪುನರುತ್ಥಾನಗೊಂಡು (ಈಸ್ಟರ್)ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬದ ಸಡಗರಕ್ಕೆ ಮುನ್ನುಡಿ ಇಟ್ಟರು.
Breaking News
- *ಭಕ್ತರ ಹರ್ಷೋದ್ಘಾರದ ನಡುವೆ ಶ್ರದ್ಧಾಭಕ್ತಿಯಿಂದ ಜರುಗಿದ ಕುಶಾಲನಗರ ಗಣಪತಿ ರಥೋತ್ಸವ*
- *ಗದ್ದೆಹಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಡುಗೆ*
- *ಸುಂಟಿಕೊಪ್ಪ ಠಾಣಾಧಿಕಾರಿ ಚಂದ್ರಶೇಖರ್ ಗೆ ಸನ್ಮಾನ*
- *ಮಡಿಕೇರಿಯಲ್ಲಿ ಆರ್ಮಿ ಗ್ರೂಪ್ ಬೈಕ್ ರ್ಯಾಲಿ*
- *ಏಲಕ್ಕಿ ಬೆಳೆಗಾರರಿಗೂ ಬಂತು ಶುಕ್ರದೆಸೆ : ಮಾರ್ಚ್ ವೇಳೆಗೆ ಕಿಲೋ ಗೆ 3500 ರೂ ತಲುಪಲಿದೆ*
- *ಬಲ್ಲಮಾವಟಿಯಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ : ಕಟ್ಟೆಮಾಡು ಬ್ಯಾಕ್ ಈಗಲ್ಸ್ ತಂಡ ಚಾಂಪಿಯನ್*
- *ನಿಧನ ಸುದ್ದಿ*
- *ಚೆಟ್ಟಳ್ಳಿಯಲ್ಲಿ ಜೇನುಕೃಷಿ ತರಬೇತಿ ಕಾರ್ಯಾಗಾರ*
- *ಕೊಳಕೇರಿ : ಸಹಕಾರ ದವಸ ಭಂಡಾರವು ಸಹಕಾರ ಸಪ್ತಾಹ ಆಚರಣೆ ಮಾಡುತ್ತಿರುವುದು ಶ್ಲಾಘನೀಯ : ಎ.ಕೆ.ಮನು ಮುತ್ತಪ್ಪ*
- *ಮಿನಿ ಒಲಿಂಪಿಕ್ಸ್ ಫುಟ್ಬಾಲ್: ಕೊಡಗು ಬಾಲಕರ ತಂಡ ರನ್ನರ್ಸ್*