ಮಡಿಕೇರಿ ಏ.10 : ಚೇರಂಬಾಣೆಯ ಬೇಂಗೂರು ಗ್ರಾಮದ ಇಂದಂಡ ಒಕ್ಕದ ಐದು ವರ್ಷಕೊಮ್ಮೆ ನಡೆಯುವ ಅಂಜಿ ಕೂಟ್ ಮೂರ್ತಿ ಗುರುಕಾರೋಣ ಕೋಲವು ಶ್ರದ್ಧಾಭಕ್ತಿಯಿಂದ ಜರುಗಿತು.
ರಾತ್ರಿ ಅಂಜಿಕೊಟ್ ಮೂರ್ತಿಗಳಾದ, ಧರ್ಮದೇವತೆ, ಪಂಜುರುಳಿ ಪಾಸಾಣ ಮೂರ್ತಿ, ಅಂಗಾರ ಮತ್ತು ಗುಳಿಗ ಕೋಲಗಳು ನಡೆದು ಅಲ್ಲಿ ನೆರೆದಿದ್ದ ಗ್ರಾಮದ ಜನರನ್ನು ವಿಶೇಷ ಭಕ್ತಿಭಾವದಲ್ಲಿ ಮುಳುಗುವಂತೆ ಮಾಡಿತು.
ಮಾರನೆಯ ದಿನ ಬೆಳಿಗ್ಗೆ ಒಕ್ಕದ ಗುರುಕಾರೋಣ ಕೋಲವು ನಡೆದು ನೆರೆದಿದ್ದ ಕುಟುಂಬಸ್ಥರಿಗೆ ಅನುವಾದ ನೀಡಲಾಯಿತು.
ಕೊಡಗಿನ ಬಿಳಿಗೇರಿ, ವಿರಾಜಪೇಟೆ, ನಾಪೋಕ್ಲು ಭಾಗಗಳಿಂದ ಆಗಮಿಸಿದ್ದ ಪಾತ್ರಿಗಳು ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಇಂದಂಡ ಪೂವಯ್ಯ, ಕುಟುಂಬ ಪೂಜಾರಿಯಾದ ಇಂದಂಡ ಪ್ರವೀಣ್, ಇಂದಂಡ ಚಿಮ್ಮಣ್ಣ ದೇವಯ್ಯ, ಮತ್ತು ಕುಟುಂಬ ಅಧ್ಯಕ್ಷರಾದ ಇಂದಂಡ ಗಣೇಶ್ ಹಾಜರಿದ್ದರು.