ಸೋಮವಾರಪೇಟೆ ಏ.11 : ಬೆಟ್ಟದಳ್ಳಿ ಯಶೋದೆ ರಂಗಟ್ರಸ್ಟ್ ಹಾಗೂ ಸಾಂದೀಪನಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಏ.15ರಿಂದ ಮೇ 3ರ ವರೆಗೆ ಮಕ್ಕಳ ಕಲಾಕಲಿಕೆ ಶಿಬಿರ ನಡೆಯಲಿದೆ ಎಂದು ಶಿಬಿರ ಸಂಚಾಲಕ ನಿಶಾಂತ್ ಮುತ್ತಣ್ಣ ತಿಳಿಸಿದ್ದಾರೆ.
ಚೌಡ್ಲು ಸಾಂದೀಪನಿ ಶಾಲಾ ಆವರಣ ಹಾಗೂ ಗೌಡಳ್ಳಿ ಶ್ರಿ ನವದುರ್ಗಾ ದೇವಾಲಯದ ಆವರಣದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಡ್ರಾಮಾ ಜೂನಿಯರ್ಸ್, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮಾರ್ಗದರ್ಶಕರಿಂದ ರಂಗಾಟ, ಅಭಿನಯ, ಚಿತ್ರಕಲೆ, ಕರಕುಶಲತೆ, ಯಕ್ಷಗಾನ, ಮೂಕಾಭಿನಯ, ಜಾನಪದ ಕುಣಿತ ಸೇರಿದಂತೆ ಇನ್ನಿತರ ರಂಗ ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 8123557304 ಹಾಗೂ 7259479331 ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.









