ಮಡಿಕೇರಿ ಏ.11 : ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಎಸ್ಸೋಸಿಯೇಷನ್, ಕೊಡಗು ಜಿಲ್ಲೆ (ನೀಮಾ, ಕೊಡಗು) ವತಿಯಿಂದ ಏ.13 ರಂದು ಜಿಲ್ಲೆಯಾದ್ಯಂತ 30ಕ್ಕೂ ಹೆಚ್ಚಿನ ಆಯುವೇ೯ದ ವೈದ್ಯರು ತಮ್ಮ ಚಿಕಿತ್ಸಾಲಯಗಳಲ್ಲಿ ನೀಮಾ ದಿನಾಚರಣೆ ಆಯೋಜಿಸಿದ್ದಾರೆ.
ಏ.13 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿವಿಧ ಆರೋಗ್ಯ ಚಿಕಿತ್ಸಾ ಕಾಯ೯ಕ್ರಮಗಳು ಆಯೋಜಿತವಾಗಿದೆ. ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಅನೇಕ ಕಾಯ೯ಕ್ರಮಗಳು ಜರುಗಲಿದೆ.
ಸೋಮವಾರಪೇಟೆ ತಾಲೂಕಿನ ಆಯುವೇ೯ದ ಚಿಕಿತ್ಸಾಲಯಗಳಲ್ಲಿ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ, ಮಾಹಿತಿ, ಕುಶಾಲನಗರ ತಾಲೂಕಿನ ಆಯುವೇ೯ದ ಚಿಕಿತ್ಸಾಲಯಗಳಲ್ಲಿ ವಿಶೇಷ ಚೇತನರಿಗೆ ಚಿಕಿತ್ಸೆ, ಮಾಹಿತಿ, ಮಡಿಕೇರಿ ತಾಲೂಕಿನ ಆಯುವೇ೯ದ ಚಿಕಿತ್ಸಾಲಯಗಳಲ್ಲಿ ಮಹಿಳೆಯರಿಗೆ ಚಿಕಿತ್ಸೆ,ಮಾಹಿತಿ, ವಿರಾಜಪೇಟೆ ತಾಲೂಕಿನ ಆಯುವೇ೯ದ ಚಿಕಿತ್ಸಾಲಯಗಳಲ್ಲಿ ಯುವಕ, ಯುವತಿಯರಿಗೆ ಆರೋಗ್ಯ ಸಂರಕ್ಷಣೆಯ ಮಾಹಿತಿ, ಚಿಕಿತ್ಸೆ ಕಾಯ೯ಕ್ರಮಗಳನ್ನು ಅಂದಿನ ದಿನ ಆಯೋಜಿಸಲಾಗಿದೆ.
ಅಲ್ಲದೇ ಈಗ ಹಲವರಿಗೆ ಕಾಡುತ್ತಿರುವ ಥೈರಾಯ್ಡ್, ಬೊಜ್ಜುತನ, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಪಿ.ಸಿ.ಓ.ಡಿ ಸಮಸ್ಯೆಗಳಿಗೆ ಮನೆಯಲ್ಲೇ ಮಾಡಬಹುದಾದ ಯೋಗಾಸನಗಳ ಮಾಹಿತಿಯನ್ನು ಎಲ್ಲರ ಉಪಯೋಗಕ್ಕಾಗಿ ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲಾಗುವುದೆಂದು ನೀಮಾ ಜಿಲ್ಲಾಧ್ಯಕ್ಷ ಡಾ.ರಾಜಾರಾಮ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.