ಮಡಿಕೇರಿ ಏ.11 : ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಮತದಾನದ ಮಹತ್ವ ಸಾರುವ ನಿಟ್ಟಿನಲ್ಲಿ ಮಡಿಕೇರಿ ತಾಲೂಕು ಜಾನಪದ ಪರಿಷತ್ ಸಹಯೋಗದಲ್ಲಿ ಏಪ್ರಿಲ್, 15 ರಂದು ವಿಶ್ವ ಚಿತ್ರಕಲಾ ದಿನಾಚರಣೆ ಸಂದರ್ಭ ಕೊಡಗು ಮತ್ತು ಮತದಾನ ವಿಷಯದ ಸಂಬಂಧಿತ ಚಿತ್ರಕಲಾ ಸ್ಪರ್ಧೆ ಆಯೋಜಿಸಿದೆ.
ನಗರದ ರಾಜಾಸೀಟು ಉದ್ಯಾನವನದಲ್ಲಿ ಏಪ್ರಿಲ್ 15 ರಂದು ಬೆಳಗ್ಗೆ 10 ಗಂಟೆಯಿಂದ ಚಿತ್ರಕಲಾ ಸ್ಪರ್ಧೆಯು 14 ವಷ೯ದೊಳಗಿನ ವಿದ್ಯಾರ್ಥಿಗಳ ವಿಭಾಗ, 14 ರಿಂದ 18 ವಷ೯ದೊಳಗಿನ ವಿದ್ಯಾಥಿ೯ ವಿಭಾಗ ಮತ್ತು 18 ವಷ೯ಕ್ಕೆ ಮೇಲ್ಪಟ್ಟವರ ವಿಭಾಗದಲ್ಲಿ ಆಯೋಜಿಸಲ್ಪಟ್ಟಿದೆ. ವಿಶ್ವ ಚಿತ್ರಕಲಾ ದಿನದ ಪ್ರಯುಕ್ತ ಜಿಲ್ಲೆಯ ಚಿತ್ರ ಕಲಾವಿದರು ಕೂಡ ವೈವಿಧ್ಯಮಯ ಚಿತ್ರಕಲೆ ರಚಿಸಲಿದ್ದಾರೆ.
ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ವಿಭಾಗದಲ್ಲಿ ನಡೆಯುವ ಚಿತ್ರಕಲಾ ಸ್ಪರ್ಧೆಯಲ್ಲಿ ಮತದಾನದ ಮಹತ್ವದ ವಿಷಯದಲ್ಲಿ ಕೊಡಗು ಮತ್ತು ಮತದಾನ ವಿಚಾರದ ಬಗ್ಗೆ ಚಿತ್ರಕಲೆ ರಚಿಸಬಹುದಾಗಿದೆ.
ಇದೇ ಸಂದರ್ಭ ‘ನಾನು ಮತದಾನ ಮಾಡುತ್ತೇನೆ’ ಎಂಬ ಬೃಹತ್ ಕ್ಯಾನ್ವಸ್ನ್ನು ರಾಜಾಸೀಟು ಉದ್ಯಾನವನದಲ್ಲಿ ಕೊಡಗಿನ ಕಲಾವಿದರು ರಚಿಸಲಿದ್ದು, ಸಾರ್ವಜನಿಕರು ಕೂಡ ಕ್ಯಾನ್ವಸ್ನಲ್ಲಿ ತಮ್ಮ ಸಂದೇಶ ಸಾರಲು ಅವಕಾಶವಿದೆ.
ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ವಿದ್ಯಾರ್ಥಿಗಳು, ಸಾರ್ವಜನಿಕರು ಸ್ಪರ್ಧೆ ಜರುಗುವ ರಾಜಾಸೀಟ್ಗೆ ಏಪ್ರಿಲ್, 15 ರಂದು ಶನಿವಾರ ಬೆಳಗ್ಗೆ 10 ಗಂಟೆಯೊಳಗೆ ಆಗಮಿಸಿ, ಸ್ಥಳದಲ್ಲಿಯೇ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ 9844060174 ಅನಿಲ್ ಎಚ್.ಟಿ. ಅಧ್ಯಕ್ಷರು, ಮಡಿಕೇರಿ ತಾಲೂಕು ಜಾನಪದ ಪರಿಷತ್, ಮಡಿಕೇರಿ ನ್ನು ಸಂಪರ್ಕಿಸಬಹುದು ಎಂದು ಸ್ವೀಪ್ ಸಮಿತಿ ಪ್ರಕಟಣೆ ತಿಳಿಸಿದೆ.