ಮಡಿಕೇರಿ ಏ.11 : ಪದ್ಮಶ್ರೀ ಪ್ರಶಸ್ತಿ ಪಡೆದು ಕುಶಾಲನಗರಕ್ಕೆ ಆಗಮಿಸಿದ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಜಿಲ್ಲೆ ಗಡಿಭಾಗ ಕುಶಾಲನಗರದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತಿಸಲಾಯಿತು.
ಕುಶಾಲನಗರ ಕೊಪ್ಪ ಗಡಿ ಭಾಗದ ಕಾವೇರಿ ಪ್ರತಿಮೆ ಬಳಿ ಕುಶಾಲನಗರ ಜಾನಪದ ಪರಿಷತ್ತು ಮತ್ತು ಕುಶಾಲನಗರ ಕೊಡವ ಸಮಾಜ ಪ್ರಮುಖರು ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದ ನಂತರ ಪ್ರಶಸ್ತಿ ಪುರಸ್ಕೃತ ರನ್ನು ಗೌರವಿಸಲಾಯಿತು.
ಈ ಸಂದರ್ಭ ಮಾತನಾಡಿದ ರಾಣಿ ಮಾಚಯ್ಯ , ತನಗೆ ಸಂದ ಪ್ರಶಸ್ತಿ ಕೊಡಗು ಜಿಲ್ಲೆಗೆ ಹಾಗೂ ಕಲಾ ಕ್ಷೇತ್ರಕ್ಕೆ ಲಭಿಸಿದ ಗೌರವ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷ ಮಂಡೆಪಂಡ ಬೋಸ್ ಮೊಣ್ಣಪ್ಪ, ಉಪಾಧ್ಯಕ್ಷ ಪುಲಿಯಂಡ ಚಂಗಪ್ಪ, ಸಮಾಜದ ನಿರ್ದೇಶಕರುಗಳಾದ ಚೌರಿರ ತಿಮ್ಮಯ್ಯ, ಕೊಕ್ಕಲೆರ ಧರಣಿ, ಮುಕ್ಕಾಟಿ ಪೊನ್ನಣ್ಣ, ಬೊಪ್ಪಂಡ ನಂದ, ನಲ್ಲಪಟ್ಟಿರ ಸೂರಪ್ಪ, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಕರ್ನಾಟಕ ಜಾನಪದ ಪರಿಷತ್ ಕುಶಾಲನಗರ ತಾಲೂಕು ಅಧ್ಯಕ್ಷ ಚಂದ್ರಮೋಹನ್, ಗೌರವಾಧ್ಯಕ್ಷ ಫ್ಯಾನ್ಸಿ ಮುತ್ತಣ್ಣ,, ವನಿತಾ ಚಂದ್ರಮೋಹನ್, ಚಲನಚಿತ್ರ ನಿರ್ದೇಶಕಿ ಸಿಂಚನ ಪ್ರೀತಮ್ ಶೆಟ್ಟಿ ಮತ್ತಿತರರು ಇದ್ದರು.