ನಾಪೋಕ್ಲು ಏ.11 : ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ಸಂಭವಿಸಿದಂತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರೀಯ ಕೈಗಾರಿಕಾ ಮೀಸಲು ಪಡೆ ಮತ್ತು ಪೊಲೀಸರು ನಾಪೋಕ್ಲುವಿನಲ್ಲಿ ಪಥಸಂಚಲನ ನಡೆಸಿದರು.
ನಾಪೋಕ್ಲು ಮಾರುಕಟ್ಟೆ ಬಳಿ ಇರುವ ಪೊಲೀಸ್ ಠಾಣಾ ಮೈದಾನದಿಂದ ಪಟ್ಟಣದ ಮುಖ್ಯಬೀದಿಯ ಮೂಲಕ ಹಳೇ ತಾಲೂಕುವರೆಗು ಕೇಂದ್ರೀಯ ಕೈಗಾರಿಕಾ ಮೀಸಲುಪಡೆ ಮತ್ತು ನಾಪೋಕ್ಲು ಪೊಲೀಸರು ಪಥ ಸಂಚಲನ ನಡೆಸುವ ಮೂಲಕ ಭಯಮುಕ್ತ ಚುನಾವಣೆ ಬಗ್ಗೆ ನಾಗರಿಕರಿಗೆ ಜಾಗೃತಿ ಮೂಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹಾಗೂ ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ಸುಂದರ್ ರಾಜ್ ಅವರ ಮಾರ್ಗದರ್ಶನದಂತೆ ಡಿವೈಎಸ್ಪಿ ಜಗದೀಶ್ ಮುಂದಾಳತ್ವದಲ್ಲಿ ನಡೆದ ಪಥಸಂಚಲನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಶೇಖರ್, ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ಮಡಿಕೇರಿ ಮಹಿಳಾ ಠಾಣಾ ಇನ್ಸ್ಪೆಕ್ಟರ್ ಯಶ್ವಂತ್, ಭಾಗಮಂಡಲ ಠಾಣಾಧಿಕಾರಿ ಪ್ರಿಯಾಂಕ ಹಾಗೂ ನಾಪೋಕ್ಲು ಠಾಣಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ವರದಿ :ಝಕರಿಯ ನಾಪೋಕ್ಲು