ಮಡಿಕೇರಿ ಏ.12 : ಅರಮೇರಿಯ ಎಸ್‌ಎಂಎಸ್ ವಿದ್ಯಾ ಸಂಸ್ಥೆಯಲ್ಲಿ ಮಾರ್ಚ್ 27ರಿಂದ ಏಪ್ರಿಲ್ 5 ರವರೆಗೆ ಹತ್ತು ದಿನಗಳ ಕಾಲ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರ ನಡೆಯಿತು.
ಶಿಬಿರದಲ್ಲಿ ಪಾಲ್ಗೊಂಡಿದ್ದ 145 ಶಿಬಿರಾರ್ಥಿಗಳಿಗೆ ಕಸದಿಂದ ರಸ, ಕಲೆ, ಕರಕುಶಲ, ಕ್ರೀಡೆ, ಅಡುಗೆ, ಇನ್ನಿತರ ಚಟುವಟಿಕೆಗಳ ಜೊತೆಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಕಾಂತ್ ರಾವ್ ಬೇಟೋಳಿ ಮತ್ತು ದೇವರ ಕಾಡುಗಳಲ್ಲಿ ಪಕ್ಷಿಗಳ ಚಲನವಲನಗಳ ಕುರಿತು ಮಾರ್ಗದರ್ಶನ ನೀಡಿದರು.
ಶಿಬಿರದಲ್ಲಿ ಸ್ಕೌಟ್ಸ್ ಮತ್ತು ಗೈಡ್ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಬ್ಯಾಡ್ಜ್ ಗಳನ್ನು ಸಂಪಾದಿಸಿಕೊಂಡರು.
ಕೊಡಗು ರೆಡ್ ಕ್ರಾಸ್ ಸೊಸೈಟಿಯ ಡಾ. ರವೀಂದ್ರಕಾಮತ್, ಶ್ರೀಮುರಳಿಧರ್ ಪ್ರಥಮ ಚಿಕಿತ್ಸೆಯ ಕಾರ್ಯಾಗಾರ ನಡೆಸಿದರು.
ದಂತ ವೈದ್ಯರಾದ ಡಾ.ಸುಪ್ರೀತಾ ದೀಪಕ್ ಮಕ್ಕಳ ಹಲ್ಲುಗಳ ಶುಚಿತ್ವ ಕಾಪಾಡುವ ಬಗೆಗೆ ಮಾಹಿತಿ ನೀಡಿದರು.
ಜನರಲ್ ತಿಮ್ಮಯ್ಯ ಜನ್ಮದಿನದ ಪ್ರಯುಕ್ತ ಮಡಿಕೇರಿಯ ತಿಮ್ಮಯ್ಯ ವೃತ್ತದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಮುಖ್ಯ ಆಯುಕ್ತ ಕೆ.ಟಿ ಬೇಬಿ ಮ್ಯಾಥ್ಯು ತಿಮ್ಮಯ್ಯ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಶಿಬಿರಾರ್ಥಿಗಳೊಡನೆ ರಾಜಾಸೀಟ್ ವರೆಗೆ ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡರು. ಬಳಿಕ ಸನ್ನಿ ಸೈಡ್, ಸಾಲುಮರದ ತಿಮ್ಮಕ್ಕ ಉದ್ಯಾನವನಗಳಿಗೆ ಭೇಟಿ ನೀಡಿದರು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ಎಸ್ಎಂಎಸ್ ವಿದ್ಯಾಸಂಸ್ಥೆಯಲ್ಲಿ ಅಧ್ಯಕ್ಷ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳು, ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ ಜಿಲ್ಲಾ ಮುಖ್ಯ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು , ಜಿಲ್ಲಾ ಕಾರ್ಯದರ್ಶಿ ಎಂ.ಎಂ.ವಸಂತಿ, ಜಂಟಿ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಜಿಲ್ಲಾ ತರಬೇತಿ ಆಯುಕ್ತರಾದ ಮೈಥಿಲಿ ರಾವ್, ಸಂಸ್ಥೆಯ ಪ್ರಾಂಶುಪಾಲರದ ಕುಸುಂ ಟಿಟೋ ಹಾಜರಿದ್ದರು. ಕಾರ್ಯಕ್ರಮವನ್ನು ಪ್ರತಿಮ ನಿರೂಪಿಸಿದರು. ದಾಕ್ಷಾಯಿಣಿ ಸ್ವಾಗತಿಸಿ, ವಂದಿಸಿದರು.