ನನಗೆ ವಿರಾಜಪೇಟೆ ಕ್ಷೇತ್ರದ ಟಿಕೆಟ್ ನೀಡದೆ ಇರುವ ಪಕ್ಷದ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ನಾನು ರಾಜಕೀಯಕ್ಕೆ ವೈಯುಕ್ತಿಕವಾಗಿ ಏನನ್ನೋ ಪಡೆಯಬೇಕೆಂದು ಬಂದವನಲ್ಲ. ಜನರಿಗಾಗಿ ಏನಾದರು ಮಾಡೋಣ ಎಂದು ಬಂದವನು. ಕಳೆದ 30 ವರ್ಷಗಳಿಂದ ಕೊಡಗು ಜಿಲ್ಲೆಯ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದ್ದೇ ನನ್ನ ಭಾಗ್ಯ. ಪ್ರವಾಹ ಮತ್ತು ಕೋವಿಡ್ ಸಂದರ್ಭದಲ್ಲಿ ಜನರ ಕಷ್ಟವನ್ನು ಹತ್ತಿರದಿಂದ ನೋಡಿದವನು ನಾನು. ಜೀವನದುದ್ದಕ್ಕೂ ಜನಸೇವೆಯಲ್ಲೇ ತೊಡಗಿಸಿಕೊಳ್ಳಬೇಕಂದು ನಿರ್ಧರಿಸಿದವನು ನಾನು. ಎಲ್ಲಾ ಸಂದರ್ಭಗಳಲ್ಲೂ ಕೊಡಗಿನ ಜನತೆ ನನ್ನ ಜೊತೆಯಲ್ಲಿರುವುದೇ ನಾನು ಮಾಡಿದ ಸೇವೆಗೆ ಸಿಕ್ಕ ಜನಾಶೀರ್ವಾದ. ರಾಜಕೀಯ ನನಗೆ ವ್ಯಾಪಾರವು ಅಲ್ಲ, ಜೀವನವು ಅಲ್ಲ ಕೇವಲ ಒಂದು ಸೇವಾಕ್ಷೇತ್ರ ಮಾತ್ರ. ಆದುದರಿಂದ ಬಿಜೆಪಿ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ದುಡಿದಿದ್ದೇನೆ, ಇನ್ನು ಮುಂದೆಯೂ ದುಡಿಯುತ್ತೇನೆ. ಕೊಡಗು ಜಿಲ್ಲೆಯ ಜನರು ಕರೆ ಮಾಡಿ ಅವರ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಿಮ್ಮ ನಿರೀಕ್ಷೆಯಂತೆ ನನಗೆ ಈ ಬಾರಿ ನಿಮ್ಮನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿಲ್ಲ. ಹಾಗೆಂದು ನಾನು ನಿಮ್ಮ ಸೇವೆಯನ್ನು ಮತ್ತು ನಿಮ್ಮ ಪರವಾದ ಹೋರಾಟವನ್ನು ನಿಲ್ಲಿಸುವುದಿಲ್ಲ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದಂತೆ ಫಲಾಪೇಕ್ಷೆ ಇಲ್ಲದೆ ಕರ್ಮ ಮಾಡು. ಅದನ್ನೇ ಮಾಡಿದ್ದೇನೆ, ಮುಂದೆಯೂ ಮಾಡುತ್ತೇನೆ. ನನ್ನನ್ನು ನಂಬಿ ನನ್ನೊಂದಿಗೆ ಹೋರಾಟದಲ್ಲಿ ಮತ್ತು ಸೇವೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟ ನನ್ನೆಲ್ಲ ಕಾರ್ಯಕರ್ತ ಬಂಧುಗಳಿಗೆ ನಾನು ಸದಾ ಚಿರಋಣಿ. ದೇಶ ಮತ್ತು ಧರ್ಮ ಉಳಿಯಬೇಕೆಂದರೆ ನಮ್ಮ ಬಿಜೆಪಿ ಪಕ್ಷ ಅಧಿಕಾರದಲ್ಲಿರಬೇಕು. ಈ ಬಾರಿಯ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಮತ್ತೆ ಕೇಂದ್ರದಲ್ಲಿ ಭಾಜಪ ಸರ್ಕಾರ ರಚನೆಗೆ ಶ್ರಮಿಸೋಣ. ದೇಶ ಮೊದಲು, ಪಕ್ಷ ನಂತರ, ವ್ಯಕ್ತಿ ಕೊನೆಗೆ.










