ಮಡಿಕೇರಿ ಏ.12 : ಕಳೆದ ಹಲವಾರು ವರ್ಷಗಳಲ್ಲಿ ಬಾಹ್ಯಾಕಾಶದಲ್ಲಿ ದೇಶ ಮಾಡಿದ ಸಾಧನೆಗಳನ್ನು ಪ್ರದರ್ಶಿಸಲು ಮತ್ತು ಮಕ್ಕಳಲ್ಲಿ ಬಾಹ್ಯಾಕಾಶದ ಹೆಚ್ಚಿನ ಆಸಕ್ತಿ ಬೆಳೆಸಲು ಏ.18 ರಂದು ಪೊನ್ನಂಪೇಟೆಯಲ್ಲಿ ಉಡಾವಣಾ ವಾಹನಗಳು, ಉಪಗ್ರಹಗಳು ಇತ್ಯಾದಿಗಳ ಮಾದರಿಗಳನ್ನು ಸಾಗಿಸುವ ’ಸ್ಪೇಸ್ ಆನ್ವೀಲ್ಸ್’ ಪ್ರದರ್ಶನ ನಡೆಯಲಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಪ್ರಾಶುಂಪಾಲ ಡಾ.ಎಂ.ಬಸವರಾಜು ಹಾಗೂ ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ.ರೋಹಿಣಿ, ಭಾರತೀಯ ಬಾಹ್ಯಾಕಾಶಸಂಸ್ಥೆ, ಕೂರ್ಗ್‌ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಕೂರ್ಗ್‌ಇನ್ಸ್ಟಿಟ್ಯೂಟ್ ಆಫ್ ಯೂನಿವರ್ಸಿಟಿಯ ಸಹಯೋಗದೊಂದಿಗೆ ಕೂರ್ಗ್‌ಇನ್ಸ್ಟಿಟ್ಯೂಟ್ ಆಫ್ಟೆಕ್ನಾಲಜಿ ಕಾಲೇಜಿನ ಆವರಣದಲ್ಲಿ ಭಾರತೀಯ ಬಾಹ್ಯಾಕಾಶ ಕೇಂದ್ರವು ಪ್ರಪ್ರಥಮ ಬಾರಿಗೆ ಕೊಡಗಿನಲ್ಲಿ ’ಸ್ಪೇಸ್‌ಆನ್ವೀಲ್ಸ್’ ಪ್ರದರ್ಶನ ನಡೆಸುತ್ತಿದೆ ಎಂದರು.
ಅಂದು ಬೆಳಿಗ್ಗೆ 10.30 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಇಸ್ರೋದ ವಿಜ್ಞಾನಿ ಶ್ರೀನಿವಾಸ್ ಮತ್ತು ಕೊಡವ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಡಾ.ಎಂ.ಸಿ.ಕಾರ್ಯಪ್ಪ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ವೈಜ್ಞಾನಿಕ ಅಭಿವೃದ್ಧಿಯ ಭಾರತದ ದೃಷ್ಟಿಯನ್ನು ಸಾಕಾರಗೊಳಿಸಲು ರಾಕೆಟ್‌ಗಳು, ಉಪಗ್ರಹಗಳು ಮತ್ತು ಅವುಗಳ ಅಪ್ಲಿಕೇಶನ್ ಗಳನ್ನು ನಿಯೋಜಿಸುವಲ್ಲಿ ಇಸ್ರೋದ ಪರಾಕ್ರಮದ ಬಗ್ಗೆ ಮತ್ತು ಮಕ್ಕಳಲ್ಲಿ ಬಾಹ್ಯಾಕಾಶದ ಕುರಿತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದರು.
ಈ ಪ್ರದರ್ಶನವು ಮೊದಲ ಎರಡು ಉಡಾವಣಾ ಪ್ಯಾಡ್‌ಗಳ ಮಾದರಿಗಳು, ಚಂದ್ರಯಾನ-1 ಮಿಷನ್, ಇಂಡಿಯನ್ಮಾರ್ಸ್ ಆರ್ಬಿಟರ್ಮಿಷನ್ – ಮಂಗಳಯಾನ್, ಭಾರತೀಯ ರಿಮೋಟ್ಸೆನ್ಸಿಂಗ್ ಅಪ್ಲಿಕೇಶನ್‌ಗಳಂತಹ ತಾಂತ್ರಿಕ ಅಪ್ಲಿಕೇಶನ್‌ಗಳು, ಮತ್ತು ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಸ್ಯಾಟಲೈಟ್, ಇತರ ಭಾರತೀಯ ಉಪಗ್ರಹ ಸಂವಹನ ಅಪ್ಲಿಕೇಶನ್‌ಗಳ, ಬಾಹ್ಯಾಕಾಶ ಪ್ರಪಂಚದ ಬಗ್ಗೆ ಉತ್ತಮ ಒಳನೋಟವನ್ನು ಒದಗಿಸುವ ಚಂದ್ರನ ಗಗನಯಾತ್ರಿ ಮತ್ತು ಚಂದ್ರಯಾನ-II, ಬಾಹ್ಯಾಕಾಶನೌಕೆಯ ಕಲಾತ್ಮಕ ಮಾದರಿಗಳನ್ನು ಹೊಂದಿದೆ. ಇದರೊಂದಿಗೆ ಇಸ್ರೋದ ಭವಿಷ್ಯದ ಕಾರ್ಯಾಚರಣೆಗಳಾದ ಆದಿತ್ಯಎಲ್-1, ಚಂದ್ರಯಾನ-3, ಗಗನ್ ಯಾನ್ ಮಿಷನ್, ವೀನಸ್‌ಆರ್ಬಿಟರ್ಮಿಷನ್ ಮತ್ತು NISAR ಮಿಷನ್‌ನ ಮಾಹಿತಿಯನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಗೋಣಿಕೊಪ್ಪದಿಂದ ಕಾಲೇಜಿನವರೆಗೆ ಉಚಿತವಾಗಿ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ಅರ್ಧತಾಸಿಗೊಂದು ಬಸ್ಸಿನ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 8310194928, 8971231520, 7899850298 ಸಂಪರ್ಕಿಸಲು ತಿಳಿಸಿದರು.