ಮಡಿಕೇರಿ ಏ.12 : ಚೆಟ್ಟಳ್ಳಿಯ ಶ್ರೀಮಂಗಲ (ಪೊವ್ವೊದಿ ) ಭಗವತಿ ಉತ್ಸವವು ಏ.14 ಮತ್ತು 15 ರಂದು ನಡೆಯಲಿದೆ.
ಏ. 11 ರಂದು ರಾತ್ರಿ ತಕ್ಕಮುಖ್ಯಸ್ಥರ ಸಮ್ಮುಖದಲ್ಲಿ ಶುದ್ದಕಳಸ ಪೂಜೆ ಸಲ್ಲಿಸಿ ಬೊಳಕ್ ಮರವನ್ನಿಟ್ಟು ಹಬ್ಬಕಟ್ಟು ಹಾಕಲಾಯಿತು.
ಏ.14 ರಂದು ಪಟ್ಟಣಿಹಬ್ಬ, ಮಧ್ಯಾಹ್ನ 2 ಗಂಟೆಗೆ ದೇವಾಲಯ ತಕ್ಕರಾದ ಮುಳ್ಳಂಡ ಐನ್ ಮನೆಯಿಂದ ಎತ್ತು ಪೋರಾಟದೊಂದಿಗೆ ದೇವರ ಭಂಡಾರವನ್ನು ತರುವುದು. ಏ.15 ರಂದು ದೊಡ್ದಹಬ್ಬವಾಗಿದ್ದು ದೇವರ ಭಂಡಾರವನ್ನು ದೇವಾಲಯಕ್ಕೆ ತರಲಾಗುವುದು. ನಂತರ ವಿಶೇಷ ಪೂಜೆ, ತೆಂಗಿಕಾಯಿ ಎಳೆಯುವುದು, ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, ಬೊಳಕ್ ಮರವನ್ನು ದೇವಾಲಯಕ್ಕೆ ಇಡಲಾಗುವುದು. ನಂತರ ಪ್ರಸಾದ ವಿತರಣೆ ನೆರವೇರಲಿದೆ.
ಏ.16 ರಂದು ಪೂರ್ವಾಹ್ನ 7 ಗಂಟೆಗೆ ಶುದ್ದ ಕಳಸ ಪೂಜೆ ನೆವೇರಿಸಿ, ದೇವರ ಭಂಡಾರವನ್ನು ತಕ್ಕರಾದ ಮುಳ್ಳಂಡ ಐನ್ ಮನೆಯಲ್ಲಿ ಒಪ್ಪಿಸಲಾಗುವುದು.