ಮಡಿಕೇರಿ ಏ.12 : ವಿಧಾನಸಭಾ ಚುನಾವಣೆ ಹಿನ್ನೆಲೆ ಕೊಡಗು ಜಿಲ್ಲಾ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಚುನಾವಣಾ ಸಂಘಟನೆಯ ಮಹಿಳಾ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಅಖಿಲ ಭಾರತ ಮಹಿಳಾ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷರಾದ ನೆಟ್ಟಾ ಡಿಸೋಜಾ ಅವರ ಆದೇಶದ ಮೇರೆಗೆ ಮಡಿಕೇರಿ ಕ್ಷೇತ್ರದ ಚುನಾವಣಾ ಸಂಘಟನೆಯ ಉಸ್ತುವಾರಿಗಳಾಗಿ ಎಂ.ಬಿ.ಸುನೀತಾ ಹಾಗೂ ಫಿಲೋಮಿನಾ ಅವರನ್ನು ನೇಮಕಗೊಳಿಸಲಾಗಿದೆ.
ವಿರಾಜಪೇಟೆ ಕ್ಷೇತ್ರಕ್ಕೆ ಕಾರ್ತಂಡ ಶೈಲಾ ಕುಟ್ಟಪ್ಪ ಹಾಗೂ ಬಿದ್ದಾಂಡ ಸುಮಿತ ಮಾದಪ್ಪ ಅವರನ್ನು ನೇಮಕಗೊಳಿಸಿ, ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‍ನ ರಾಜ್ಯಾಧ್ಯಕ್ಷೆ ಡಾ.ಬಿ.ಪುಷ್ಪ ಅಮರನಾಥ್ ತಿಳಿಸಿದ್ದಾರೆ ಎಂದು ಸುರಯ್ಯ ಅಬ್ರಾರ್ ತಿಳಿಸಿದ್ದಾರೆ.









