ಸುಂಟಿಕೊಪ್ಪ,ಏ.13: ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಕೌಟ್ಸ್, ಗೈಡ್ಸ್, ಕಬ್ಸ್, ಬುಲ್ ಬುಲ್‍ಗಳಿಗೆ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿತ್ತು.
ಸಂತ ಅಂತೋಣಿ ಶಾಲಾ ಸಭಾಂಗಣದಲ್ಲಿ ನಾಲ್ಕು ದಿನಗಳ ಶಿಬಿರಕ್ಕೆ ರಾಜ್ಯ ಗೈಡ್ ಸಂಸ್ಥೆಯ ಸದಸ್ಯೆ ಡೈಸಿ ಹಾಗೂ ಶಾಲೆಯ ಮುಖ್ಯೋಪಾದ್ಯಾಯನಿ ಸೀಸ್ಟರ್ ವೀರ ಚಾಲನೆ ನೀಡಿದರು..
ಬೇಸಿಗೆ ಶಿಬಿರದಲ್ಲಿ 125 ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದು, ಪ್ರಾರ್ಥನೆ, ಧ್ವಜಾರೋಹಣ, ಸಭಾ ಕಾರ್ಯಕ್ರಮ, ಆಟೋಟ ಸ್ಪರ್ಧೆಗಳು, ಪ್ರಥಮ ಚಿಕಿತ್ಸೆ, ಘನವಂದನೆ, ಸಂಸ್ಥೆಯ ಉದ್ದೇಶ, ನಿಯಮ ಪ್ರತಿಜ್ಞೆ, ಪುನರಾವರ್ತನೆ, ಕರಕುಶಲ ವಸ್ತುಗಳ ತಯಾರಿಕೆ, ಹಾಗೂ ಪ್ರದರ್ಶನ, ಗ್ರಾಮ ಸ್ವಚ್ಛತೆ, ಹೊರ ಸಂಚಾರ, ನೃತ್ಯ ಮನರಂಜನೆ ಸೇರಿದಂತೆ ತರಬೇತಿಗಳನ್ನು ್ಲ ನೀಡಲಾಯಿತು.
ಕಬ್ಸ್ ಮಾಸ್ಟರ್ ಈವಾ ಜೀತಾ ಬೆನ್ನಿಸ್, ಮಹೇಶ್, ಗೈಡ್ ನಾಯಕಿ ಪ್ರೀತ್ ಜೋಯ್ಸ್ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.








