ಸುಂಟಿಕೊಪ್ಪ,ಏ.13: ಸುಂಟಿಕೊಪ್ಪ ಸಿ.ಎಸ್.ಐ ವತಿಯಿಂದ ನೂತನ ದೇವಾಲಯ ಕಟ್ಟಡದ ಪ್ರತಿಷ್ಠಾಪನೆ ಹಾಗೂ ದೃಢೀಕರಣ ಸಂಸ್ಕಾರವು ಏ.14 ರಂದು ನೆರವೇರಲಿದೆ.
ಇಮ್ಮಾನೂವೆಲ್ ನೂತನ ದೇವಾಲಯದ ಲೋಕಾರ್ಪಣೆ, ದೇವರ ವಾಕ್ಯದ ಸಂದೇಶವನ್ನು ಸಿ.ಐ.ಎಸ್., ಕೆ.ಎಸ್.ಡಿ. ಬಿಷೋಪ್ ರೈಟ್, ರೆವೆ, ಹೇಮಚಂದ್ರಕುಮಾರ್ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಿ.ಐ.ಎಸ್., ಕೆ.ಎಸ್.ಡಿ. ವಿಶ್ರಾಂತ ಬಿಷೋಪ್‍ರುಗಳು, ಪದಾಧಿಕಾರಿಗಳು, ಮಂಗಳೂರು, ಉಡುಪಿ, ಕೊಡಗು, ಹಾಸನ, ಮೈಸೂರು, ಚಾಮರಾಜನಗರ ವಲಯದ ಅಧ್ಯಕ್ಷರುಗಳು, ನಮ್ಮ ಸಭೆಯಲ್ಲಿ ಸೇವೆ ಸಲ್ಲಿಸಿದ ಸಭಾಪಾಲಕರುಗಳು ಹಾಗೂ ಸಭಾಪಾಲಕ ರೆವ, ಅಮೃತರಾಜ್, ಸಭಾ ಸೇವಕರ ಸಂಧ್ಯಾ ಸುಪ್ರಿತ ಆಗಮಿಸಲಿದ್ದಾರೆ.









