ನಾಪೋಕ್ಲು ಏ.20 : ಲಯನ್ಸ್ ಕ್ಲಬ್ ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಹಾಗೂ ಲಿಯೋ ಕ್ಲಬ್ ಪದಗ್ರಹಣ ಸಮಾರಂಭ ನಡೆಯಿತು.
ಲಯನ್ಸ್ ಜಿಲ್ಲಾ ಗವರ್ನರ್ ಸಂಜೀತ್ ಶೆಟ್ಟಿ ನಾಪೋಕ್ಲು ಲಯನ್ಸ್ ಕ್ಲಬ್ ಗೆ ಅಧಿಕೃತ ಭೇಟಿ ನೀಡಿ ಹಳೆ ತಾಲೂಕಿನ ಬಸ್ಸು ತಂಗುದಾಣವನ್ನು ಲಯನ್ಸ್ ಮತ್ತು ಲಿಯೋ ಕ್ಲಬ್ ವತಿಯಿಂದ ದತ್ತು ಸ್ವೀಕರಿಸಿ ಬಸ್ಸು ತಂಗುದಾಣದ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿದರು.
ನಂತರ ಲಯನ್ಸ್ ವಲಯ ಅಧ್ಯಕ್ಷ ಮುಕ್ಕಾಟಿರ ಎಂ ವಿನಯ್ ಅಧ್ಯಕ್ಷತೆಯಲ್ಲಿ ಕೊಡವ ಸಮಾಜದ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಲಯನ್ಸ್, ಮಲ್ಟಿಪಲ್ ಚೇರ್ಮನ್ ವಸಂತಶೆಟ್ಟಿ, ಲಿಯೋ ಪದಗ್ರಹಣ ಅಧಿಕಾರಿ ಪ್ರೀತಮ್ ಪೊನ್ನಪ್ಪ, ಪ್ರಗತಿಶೆಟ್ಟಿ, ಖಜಾಂಜಿ ಕುಟ್ಟಪ್ಪ ಎಂ.ಬಿ , ಪ್ರಾಂತೀಯ ಅಧ್ಯಕ್ಷ ಕೋಟೆರ ಶಾಶ್ವತ್ ಬೋಪಣ್ಣ, ವಲಯ ಅಧ್ಯಕ್ಷ ಮೋಹನ್ ಕುಮಾರ್, ಪ್ರಾಂತೀಯ ಅಂಬಾಸಿಡರ್ ನವೀನ್ ಅಂಬೆಕಲ್, ಲಯನ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳು : ನೂತನವಾಗಿ ಲಿಯೋ ಕ್ಲಬ್ ಅನ್ನು ಉದ್ಘಾಟಿಸಲಾಯಿತು. ಕ್ಲಬ್ನ ನೂತನ ಅಧ್ಯಕ್ಷರಾಗಿ ಕೇಟೋಳಿರ ಗಾಯನ ಚರ್ಮಣ, ಕಾರ್ಯದರ್ಶಿಯಾಗಿ ರಿಜ್ವಾನ್, ಕೋಶಾಧಿಕಾರಿಯಾಗಿ ಶಿವಚಾಳಿಯಂಡ ಕಾಳಪ್ಪ ಆಯ್ಕೆಯಾಗಿ ವಿವಿಧ ಶಾಲೆಗಳ 25 ವಿದ್ಯಾರ್ಥಿಗಳ ತಂಡ ಸೇರ್ಪಡೆಯಾಯಿತು.
ಕ್ಲಬ್ ಮಾರ್ಗದರ್ಶಕರಾಗಿ ಕೋಟೆರ ಡಾ.ಪಂಚಮ್ ತಿಮ್ಮಯ್ಯ, ಕೇಟೋಳಿರ ರತ್ನ ಚರ್ಮನ ಕಾರ್ಯನಿರ್ವಹಿಸಿದರು. ನಾಳಿಯಂಡ ಪ್ರೀತಂ ಪೊನ್ನಪ್ಪ ಪದಗ್ರಹಣ ನೆರವೇರಿಸಿದರು. ಅಪ್ಪು ಮಣಿಯಂಡ ಶೈಲಾಭೀಮಯ್ಯ ಪ್ರಾರ್ಥಿಸಿ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ ಧ್ವಜವಂದನೆ ನೆರವೇರಿಸಿದರು.
ಎಂ.ಎಂ.ವಿನಯ್ ಸ್ವಾಗತಿಸಿದ ಕಾರ್ಯಕ್ರಮವನ್ನು ಕಾರ್ಯದರ್ಶಿ ಕನ್ನಂಬೀರ ಸುಧಿ ತಿಮ್ಮಯ್ಯ ವರದಿ ವಾಚಿಸಿದರು. ಕುಂಚೆಟ್ಟಿರ ರೇಷ್ಮಾ ಉತ್ತಪ್ಪ ಅತಿಥಿಗಳ ಪರಿಚಯ ಮಾಡಿದರು.
ಈ ಸಂದರ್ಭ ಮಂದಪಂಡ ಪುಷ್ಪ ಸತೀಶ್ ಹಾಗೂ ಬಾಚಮಂಡ ಅಪ್ಪಣ್ಣ ನೂತನ ಲಯನ್ಸ್ ಕ್ಲಬ್ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು.
ವರದಿ : ದುಗ್ಗಳ ಸದಾನಂದ.