ಮಡಿಕೇರಿ ಏ.15 : ಭಾರತೀಯ ಭೂ ಸೇನೆಯಲ್ಲಿ ಕರ್ನಲ್ ಹುದ್ದೆಗೆ ಮಂಡೇಪಂಡ ಸ್ಮಿತಾ ಅಯ್ಯಪ್ಪ (ತಾಮನೆ-ಮೇವಡ) ನೇಮಕಗೊಂಡಿದ್ದು, ಜಿಲ್ಲೆಯ ಮೊದಲ ಮಹಿಳೆ ಕರ್ನಲ್ ಹುದ್ದೆ ತಲುಪಿದ್ದಾರೆ.
2005ರಲ್ಲಿ ಚೆನ್ನೈನಲ್ಲಿ ತರಬೇತಿ ಪಡೆದು ಆರ್ಮಿ ಸರ್ವಿಸಸ್ ಕೋರ್‍ಗೆ ಸೇರ್ಪಡೆಗೊಂಡು ತನ್ನ 18 ವರ್ಷದ ಸೇವೆಯಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿದ ಸ್ಮಿತಾ ಅವರು ವಿಶ್ವಸಂಸ್ಥೆ ಶಾಂತಿಪಾಲನಾ ಸಂಸ್ಥೆಗೆ ನಿಯುಕ್ತಿಗೊಂಡು ಇಸ್ರೇಲ್ ಮತ್ತು ಸಿರಿಯಾದಲ್ಲಿ ಕರ್ತವ್ಯ ನಿರ್ವಹಿಸಿ ತನ್ನ ಅತ್ಯುತ್ತಮ ನಿರ್ಣಯಗಳಿಗೆ ಅಲ್ಲಿನ ಫೋರ್ಸ್ ಕಮಾಂಡ್‍ನಿಂದ ಕಮಾಂಡೇಶನ್ ಕಾರ್ಡ್ ಪಡೆದಿದ್ದಾರೆ.
ಇವರು ನಿವೃತ್ತ ಯೋಧ ಮೇವಡ ಅಪ್ಪಣ್ಣ ರಾಧ ದಂಪತಿ ಪುತ್ರಿಯಾಗಿದ್ದು, ಕರ್ನಲ್ ಮಂಡೇಪಂಡ ಅಯ್ಯಪ್ಪ ಅವರ ಪತ್ನಿಯಾಗಿದ್ದಾರೆ.











