ಮಡಿಕೇರಿ ಏ.15 : ಕುದುಕುಳಿ ಕ್ರಿಕೆಟ್ ಸಮಿತಿ ಆಯೋಜಿಸಿದ ಗೌಡ ಕುಟುಂಬಗಳ ನಡುವಿನ ಕುದುಕುಳಿ ಐನ್‍ಮನೆ ಕ್ರಿಕೆಟ್ ಕಪ್‍ನಲ್ಲಿ ಪರ್ಲಕೋಟಿ ತಂಡ ಚಾಂಪಿಯನ್ ಪಟ್ಟ ಮಡುಗೇರಿಸಿಕೊಂಡಿದೆ.
ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಪರ್ಲಕೋಟಿ ಮತ್ತು ಹೊಸೊಕ್ಲು ತಂಡಗಳ ನಡುವೆ ಸೆಣೆಸಾಟ ನಡೆಯಿತು. ಪರ್ಲಕೋಟಿ ತಂಡವು ಆರಂಭಿಕ ಉತ್ತಮ ಪ್ರದರ್ಶನ ನೀಡಿತು. 10 ಓವರ್ ನಲ್ಲಿ 104 ರನ್ ಗಳಿಸಿ ಎದುರಾಳಿ ತಂಡಕ್ಕೆ ಸವಾಲು ನೀಡಿತು. ನಂತರ ಬೌಲಿಂಗ್ ಮೂಲಕ ಎದುರಾಳಿ ಹೊಸೊಕ್ಲು ತಂಡವನ್ನು ಕೇವಲ 54 ರನ್‍ಗಳಿಗೆ ಕಟ್ಟಿ ಹಾಕಿತು. ಇದರಿಂದ ಹೊಸೊಕ್ಲು ತಂಡ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಎರಡನೇ ಸೆಮಿಫೈನಲ್‍ನಲ್ಲಿ ಮೊದಲು ಬ್ಯಾಟ್ ಮಾಡಿದ ಪರ್ಲಕೋಟಿ ತಂಡ 7 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿತು. ಪರ್ಲಕೋಟಿ ಮತ್ತು ಪುದಿನೆರವನ ತಂಡಗಳ ನಡುವಿನ ರೋಚಕ ಪಂದ್ಯದಲ್ಲಿ ಪುದಿನೆರವನ ತಂಡ 84 ರನ್ ಗಳಿಸಿ ಒಂದು ರನ್‍ಗಳ ವಿರೋಚಿತ ಸೋಲನ್ನು ಅನುಭವಿಸಿತು.
ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಎಡಿಕೇರಿ ತಂಡವು ಮೊದಲು ಬ್ಯಾಟ್ ಮಾಡಿ ಐದು ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿದರೆ ಪುದಿನೆರವನ ತಂಡ ಮೂರು ವಿಕೆಟ್ ನಷ್ಟಕ್ಕೆ 51 ರನ್ ಮಾಡಿ ಮೂರನೇ ಸ್ಥಾನ ಗಳಿಸಿತು. ಎಡಿಕೇರಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಸಮಾರೋಪ : ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುದುಕುಳಿ ಕುಟುಂಬದ ಪಟ್ಟೆದಾರ ಕುದುಕುಳಿ ಯು.ಕೃಷ್ಣಪ್ಪ ವಹಿಸಿದ್ದರು.
ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್, ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ, ಭಾಗಮಂಡಲ ಗೌಡ ಸಮಾಜದ ಅಧ್ಯಕ್ಷ ಕುದುಪಜೆ ಪಳಂಗಪ್ಪ, ಕುದುಕುಳಿ ಜಗದೀಶ್, ಕೆದಂಬಾಡಿ ವಿಶುಕುಮಾರ್ ಹಾಜರಿದ್ದರು. ಕುದುಕುಳಿ ಕಿಶೋರ್ ಸ್ವಾಗತಿಸಿದರು. ಕುದುಕುಳಿ ಚೈತ್ರ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸಮಿತಿ ವತಿಯಿಂದ ಪಟ್ಟೆದಾರ ಕೃಷ್ಣಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೈಯಕ್ತಿಕ ಪ್ರಶಸ್ತಿ :: ಪಂದ್ಯಾವಳಿಯಲ್ಲಿ ಬೆಸ್ಟ್ ಕ್ಯಾಚರ್ ಬಿಪಿನ್ ಎಡಿಕೇರಿ, ಬೆಸ್ಟ್ ವಿಕೆಟ್ ಕೀಪರ್ ಪರ್ಲಕೋಟಿ ಸಜ್ಜನ್, ಬೆಸ್ಟ್ ಬೌಲರ್ ಪರ್ಲಕೋಟಿ ವಿಜೇತ್, ಬೆಸ್ಟ್ ಬ್ಯಾಟ್ಸ್‍ಮೆನ್ ಪುದಿನೆರವನ ನೂತನ್, ಅಂತಿಮ ಪಂದ್ಯದ ಪಂದ್ಯ ಶ್ರೇಷ್ಠ ಪರ್ಲಕೋಟಿ ದರ್ಶನ್, ಅತ್ಯಧಿಕ ರನ್ ಗಳಿಸಿದ ಆಟಗಾರ ರಕ್ಷಿತ್ ಪರ್ಲಕೋಟಿ, ಸರಣಿ ಶ್ರೇಷ್ಠ ರಕ್ಷಿತ್ ಪರ್ಲಕೋಟಿ ಬಹುಮಾನ ಪಡೆದುಕೊಂಡರು.











