ನಾಪೋಕ್ಲು ಏ.18 : ಕ್ರೀಡೆ ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ, ಎಳೆ ಮನಸ್ಸುಗಳು ಕ್ರೀಡೆ ಎಂದಾಕ್ಷಣ ಉಲ್ಲಾಸಿತಗೊಳ್ಳುತ್ತವೆ ಅರಳುವ ಪ್ರತಿಭೆಗಳಿಗೆ ಇಂತಹ ಶಿಬಿರಗಳು ವೇದಿಕೆಯಾಗಿವೆ ಎಂದು ಕೆಂಬಡತಂಡ ಸಿಮ್ಸ್ ಮಂದಣ್ಣ ಅಭಿಪ್ರಾಯಪಟ್ಟರು.
ಮೂರ್ನಾಡು ವಿದ್ಯಾ ಸಂಸ್ಥೆಯ ಜನರಲ್ ಕೆ.ಎಸ್.ತಿಮ್ಮಯ್ಯ ಅಕಾಡೆಮಿ ಫಾರ್ ಸ್ಪೋರ್ಟ್ಸ್ ಅಂಡ್ ಗೇಮ್ಸ್ ವತಿಯಿಂದ 12ನೇ ವರ್ಷದ ಹಾಕಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಶಿಬಿರಾರ್ಥಿಗಳು ಶಿಬಿರ ಮುಗಿದ ನಂತರವೂ ಕೂಡ ದೈಹಿಕ ಚಟುವಟಿಕೆಯ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಏಪ್ರಿಲ್ 1 ರಿಂದ ಆರಂಭಗೊಂಡು ಸುಮಾರು 16 ದಿನಗಳ ಕಾಲ ನಡೆದ ಶಿಬಿರ ಮುಕ್ತಾಯಗೊಂಡಿತು.
74 ಶಿಬಿರಾರ್ಥಿಗಳನ್ನ ಒಳಗೊಂಡಿದ್ದ ಈ ಶಿಬಿರದಲ್ಲಿ ಆರು ಮಂದಿ ತರಬೇತಿದಾರರಿದ್ದರು. ಎಲ್ಲಾ ದೈಹಿಕ ತರಬೇತುದಾರರು ಶಿಬಿರಾರ್ಥಿಗಳು ಪೋಷಕ ವರ್ಗದವರು ಹಾಜರಿದ್ದರು.
ಈ ಸಂದರ್ಭ ವೇದಿಕೆಯಲ್ಲಿದ್ದ ಗಣ್ಯರು ಶಿಬಿರಾರ್ಥಿಗಳಿಗೆ ಅರ್ಹತಾ ಪತ್ರ ವಿತರಿಸಿ ಶುಭ ಹಾರೈಸಿದರು.
ವರದಿ : ದುಗ್ಗಳ ಸದಾನಂದ.