ನಾಪೋಕ್ಲು ಏ.18 : ಮೂಟೇರಿ ಉಮಾಮಹೇಶ್ವರಿ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.
ಎರಡು ದಿನಗಳ ಕಾಲ ನಡೆದ ಹಬ್ಬದಲ್ಲಿ ದೀಪಾರಾಧನೆ, ದೇವರ ನೃತ್ಯಬಲಿ ನಡೆಯಿತು.
ಮುಖ್ಯ ಹಬ್ಬದಂದು ಮಧ್ಯಾಹ್ನ ಎತ್ತುಪೋರಾಟ, ಬೊಳಕಾಟ್, ದುಡಿಕೊಟ್ ಪಾಟ್, ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ನೆರವೇರಿತು. ರಾತ್ರಿ ದೇವರ ಅವಭೃತ ಸ್ನಾನ ಹಾಗೂ ನೃತ್ಯಬಲಿ ನಡೆಯಿತು.
ವಾರ್ಷಿಕ ಉತ್ಸವದಲ್ಲಿ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡು ತಮ್ಮ ಇಷ್ಟಾರ್ಥ ಸಿದ್ದಿಗೆ ವಿವಿಧ ಹರಕೆ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭ ದೇವಾಲಯದ ತಕ್ಕರಾದ ವಾಂಜಂಡ ಬೋಪಯ್ಯ, ಆಡಳಿತ ಮಂಡಳಿ ಅಧ್ಯಕ್ಷ ಅಪ್ಪಚ್ಚಿರ ರೆಮ್ಮಿ ನಾಣಯ್ಯ, ಉಪಾಧ್ಯಕ್ಷ ಕಾಟುಮಣಿಯಂಡ ಉಮೇಶ್, ಕಾರ್ಯದರ್ಶಿ ಪುಲ್ಲೇರ ವಿಠಲ ಪಳಂಗಪ್ಪ, ಆಡಳಿತ ಮಂಡಳಿ ಸದಸ್ಯರು, ಊರ ಮತ್ತು ಪರಾವೂರಿನ ಭಕ್ತಾದಿಗಳು ಪಾಲ್ಗೊಂಡಿದ್ದರು.
ದೇವಾಲಯದ ಮುಖ್ಯ ಅರ್ಚಕ ಕೀರ್ತೀಶ್ ಪೂಜಾ ಕೈ ಕಾರ್ಯಗಳನ್ನು ನೆರವೇರಿಸಿದರು.
ವರದಿ : ದುಗ್ಗಳ ಸದಾನಂದ.