ಸುಂಟಿಕೊಪ್ಪ ಏ.18 : ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ ತೆರೆ ಮಹೋತ್ಸವವು ವಿವಿಧ ಪೂಜಾಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು.
ಧ್ವಜಾರೋಹಣದೊಂದಿಗೆ ಆರಂಭಗೊಂಡ ತೆರೆ ಮಹೋತ್ಸವವು ಬಾವುಟ ಇಳಿಸವ ಮೂಲಕ ಸಂಪನ್ನಗೊಂಡಿತು.
ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವಿಕೆ, ಶ್ರೀಮುತ್ತಪ್ಪ ವೆಳ್ಳಾಟಂ, ಚಂಡೆಮೇಳವು ನಡೆಯಿತು.
ನಂತರ ವಾದ್ಯಮೇಳದೊಂದಿಗೆ ಶ್ರೀಶಾಸ್ತಪ್ಪನ ವೆಳ್ಳಾಟಂ, ಶ್ರೀ ಗುಳಿಗನ ವೆಳ್ಳಾಟಂ ಜರುಗಿತು. ಸಂಜೆ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ಮಹಿಳೆಯರು ಮತ್ತು ಮಕ್ಕಳು ತಲಾ ದೀಪವನ್ನು ಹಿಡಿದು ಅಡಿಯರ ಮೆರವಣಿಗೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ಭಕ್ತಾಧಿಗಳು ಸಾಗಿದರು.
ನಂತರ ಶ್ರೀ ಮುತ್ತಪ್ಪ ವೆಳ್ಳಾಟಂ, ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ರಕ್ತ ಚಾಮುಂಡಿ ವೆಳ್ಳಾಟಂ, ಶ್ರೀ ವಸೂರಿಮಾಲೆ ಸ್ನಾನಕ್ಕೆ ಹೊರಡುವುದು, ಶ್ರೀ ವಿಷ್ಣುಮೂರ್ತಿ ವೆಳ್ಳಾಟಂ, ಶ್ರೀ ವಸೂರಿಮಾಲೆ ಮೆರವಣಿಗೆ, ಕಳಿಗಪಾಟ್, ಅಂದಿವೇಳ ಕಳಸಂ ಸ್ವೀಕರಿಸಿತು. ಬಳಿಕ ವಳ್ಳಕಟ್ಟ್, ಶ್ರೀ ಗುಳಿಗನ ಕೋಲ, ಶ್ರೀ ಶಾಸ್ತಪ್ಪನ ಕೋಲ, ಬೆಳಗಿನವರೆಗೆ ಶ್ರೀ ತಿರುವಪ್ಪನ ಕೋಲ, ಗಂಭೀರ ಪಟಾಕಿಗಳನ್ನು ಸಿಡಿಸಲಾಯಿತು.
ಮರುದಿನ ಬೆಳಿಗ್ಗೆ ಶ್ರೀ ರಕ್ತ ಚಾಮುಂಡಿಕೋಲ, ಶ್ರೀ ಮುತ್ತಪ್ಪ ಮತ್ತು ಶ್ರೀ ತಿರುವಪ್ಪ ದೇವರ ಪಳ್ಳಿವೇಟ, ಶ್ರೀ ವಿಷ್ಣುಮೂರ್ತಿಕೋಲ, ಶ್ರೀ ಚಾಮುಂಡೇಶ್ವರಿ ಕೋಲ, ಶ್ರೀ ವಸೂರಿ ಮಾಲೆ ಕೋಲ, ಮಧ್ಯಾಹ್ನ ಗುರುಶ್ರೀ ದರ್ಪಣ, ಬಾವುಟ ಇಳಿಸುವುದರೊಂದಿಗೆ ತೆರೆ ಮಹೋತ್ಸವವು ಸಂಪನ್ನಗೊಂಡಿತು.
ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀಮುತ್ತಪ್ಪ ದೇವಸ್ಥಾನದ ಆರ್ಚಕರಾದ ಮಂಜುನಾಥ ಉಡುಪ ಹಾಗೂ ಮುತ್ತಪ್ಪ ದೇವಸ್ಥಾನ ಪೂಜಾರಿ ಶಿವರಾಂ ಉತ್ಸವದ ಪೂಜಾವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು.
ಈ ಸಂದರ್ಭ ದೇವಸ್ಥಾನ ಸಮಿತಿ ಕಾರ್ಯದರ್ಶಿ ಶಶಿಕಾಂತರೈ, ಖಜಾಂಜಿ ಎಸ್.ಜಿ.ಶ್ರೀನಿವಾಸ್, ಕೆ.ಪಿ.ಜಗನ್ನಾಥ್, ಎ.ಶ್ರೀಧರ್ ಕುಮಾರ್, ಸುರೇಶ್ ಗೋಪಿ, ಎ.ಶ್ರೀಧರನ್, ಧನುಕಾವೇರಪ್ಪ, ಫೃಥ್ವಿರಾಜ್, ಸುರೇಶ್ ಚಂದು, ದಿನು ದೇವಯ್ಯ, ರಮೇಶ್ ಪಿಳ್ಳೆ, ವಿ.ಎ.ಸಂತೋಷ್ ಕುಮಾರ್, ವಿನೋದ್, ದೇವಸ್ಥಾನ ಅರ್ಚಕರಾದ ಮಂಜುನಾಥ ಉಡುಪ, ಮುತ್ತಪ್ಪ ದೇವಸ್ಥಾನ ಪೂಜಾರಿ ಇದ್ದರು.
ತೆರೆ ಮಹೋತ್ಸವದ ಅಂಗವಾಗಿ ದೇವಾಲಯವನ್ನು ಬಣ್ಣ ಬಣ್ಣದ ವಿದ್ಯುತ್ ದೀಪ, ಹೂ, ತಳಿರು ತೋರಣಗಳಿಂದ ಸಿಂಗಾರಿಸಲಾಗಿತ್ತು.