ಮಡಿಕೇರಿ ಏ.22 : ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಕುತೆಟ್ ಅಪ್ಪಚ್ಚಿರ ಕುಟುಂಬಸ್ಥರು ನಿರ್ಧರಿಸಿದ್ದಾರೆ.
ದೊಡ್ಡ ಪುಲಿಕೋಟು ಗ್ರಾಮದ ಕುತೆಟ್ ಅಪ್ಪಚ್ಚಿರ ಕುಟುಂಬಸ್ಥರನ್ನು ಕಳೆದ ಹಲವು ವರ್ಷಗಳಿಂದ ಸರ್ಕಾರದ ವಿವಿಧ ಕಾಮಗಾರಿಗಳಿಂದ ವಂಚಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದರು.
ಕುಟುಂಬದಲ್ಲಿ 84 ಮತದಾರರಿದ್ದು, ಈ ಬಾರಿ ನಾವು ಮತದಾನ ಮಾಡುವುದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಕುಟುಂಬಸ್ಥರು, ಚುನಾವಣೆ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ.