ಶನಿವಾರಸಂತೆ ಏ.22 : ಮತಗಟ್ಟೆವಾರು ಹಾಗೂ ಸೆಕ್ಟರ್ ವಾರು 80 ವರ್ಷ ಮೇಲ್ಪಟ್ಟ ಮತ್ತು ವಿಶೇಷ ಚೇತನರಿಂದ ಮತದಾನ ಮಾಡಿಸುವ ಸಂಬಂಧ ಶನಿವಾರಸಂತೆ ಹೋಬಳಿಯ ಮನೆ ಮನೆಗೆ ಶನಿವಾರ ಸೆಕ್ಟರ್ ಅಧಿಕಾರಿಗಳು ಭೇಟಿ ನೀಡಿದರು. ಸೆಕ್ಟರ್ ಅಧಿಕಾರಿ ಯಾದವಬಾಬು, ಉಪತಹಶೀಲ್ದಾರ್ ಟಿ. ಸಿ. ನಾಗರಾಜು ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಮತದಾನದ ಕುರಿತು ಮಾಹಿತಿ ನೀಡಿದರು. (ವರದಿ : ದಿನೇಶ್ ಮಾಲಂಬಿ, ಶನಿವಾರಸಂತೆ)











