ಮಡಿಕೇರಿ ಏ.25 : ಈ ಬಾರಿಯ ವಿಧಾನ ಸಭಾ ಚುಣಾವಣೆಯಲ್ಲಿ ಜನತೆ ಬದಲಾವಣೆಯನ್ನು ಬಯಸಿದ್ದು, ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಬರುತ್ತಿರುವ ಜಾತ್ಯತೀತ ಜನತಾ ದಳದ ಗೆಲುವು ನಿಶ್ಚಿತವೆಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ. ಗಣೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಇಂದಿರಾಗಾಂಧಿ ವೃತ್ತದ ಚೌಕಿಯಿಂದ ಮಂಗಳವಾರ ಬೆಳಗ್ಗೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ. ಗಣೇಶ್, ಮಡಿಕೇರಿ ಕ್ಷೇತ್ರದ ಪಕ್ಷದ ಅಭ್ಯರ್ಥಿ ನಾಪಂಡ ಮುತ್ತಪ್ಪ ಅವರ ನೇತೃತ್ವದಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳಿಗೆ ತೆರಳಿ ಮತಯಾಚನೆ ಮಾಡಿದರು.
ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಎಂ. ಗಣೇಶ್, ಜಿಲ್ಲೆಯ ಜನರ ಸಂಕಷ್ಟಗಳಿಗೆ ಮಾಜಿ ಮುಖ್ಯ ಮಂತ್ರಿ ಪಕ್ಷದ ಪ್ರಮುಖರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಈ ಹಿಂದಿನಿಂದಲೂ ಸ್ಪಂದಿಸಿಕೊಂಡು ಬಂದಿದ್ದಾರೆ. ಅವರು ಜಿಲ್ಲೆಗೆ ಪ್ರಚಾರಕ್ಕೆ ಬರುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆಂದು ತಿಳಿಸಿದರು.
ವಿಧಾನ ಸಭಾ ಚುನಾವಣೆಯ ಈಗಿನ ವಾತಾವರಣ ಜೆಡಿಎಸ್ಗೆ ಅನುಕೂಲಕರವಾಗಿ ಕಾಣುತ್ತಿದ್ದು, ಮತದಾರರು ರಾಜಕೀಯ ಬದಲಾವಣೆಯ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ. ಜನತೆಯ ಆಶೀರ್ವಾದ ಖಂಡಿತವಾಗಿ ಜೆಡಿಎಸ್ಗೆ ದೊರಕಲಿದೆ ಎನ್ನುವ ವಿಶ್ವಾಸವನ್ನು ವ್ಯಕಪಡಿಸಿದರು.
ಚುನಾವಣಾ ಮತ ಪ್ರಚಾರದಲ್ಲಿ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬಿ.ಬಿ. ಪುಷ್ಪಾವತಿ, ಲೀಲಾ ಶೇಷಮ್ಮ, ಸುನಿಲ್, ಜಾಶಿರ್, ಸುನಂದ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.