ಚೆಟ್ಟಳ್ಳಿ ಏ.26 : ಚೆಟ್ಟಳ್ಳಿಯ ಬೇಟೆಗಾರ ಅಯ್ಯಪ್ಪ ನೆಲೆಯಲ್ಲಿ ವಾರ್ಷಿಕ ಪೂಜಾಕೈಂಕರ್ಯ ಶ್ರದ್ಧಾಭಕ್ತಿಯಿಂದ ನೆರವೇರಿತು.
ಶ್ರೀಮಂಗಲ ಶ್ರೀಭಗವತಿ ದೇವಾಲಯದಲ್ಲಿ ವಾರ್ಷಿಕ ಉತ್ಸವ ನೆರವೇರಿದ ನಂತರ ಊರಿನ ಪುರಾತನ ನೆಲೆಯಾದ ಬೇಟೆಗಾರ ಅಯ್ಯಪ್ಪನಿಗೆ ಪೂಜೆ ಅರ್ಪಿಸಲಾಯಿತು. ಊರಿಗೆ ಒಳಿತನ್ನು ಮಾಡೆಂದು ಪುತ್ತರಿರ ಮುತ್ತಣ್ಣ ಊರಿನವರ ಪರವಾಗಿ ಬೇಡಿಕೊಂಡರು. ಬೇಟೆಗಾರ ಅಯ್ಯಪ್ಪನಿಗೆ ಅಂಬ್(ಬಿಲ್ಲು), ಕಜ್ಜಾಯ ಹಾಗೂ ಹಾಲಿನ ಅಭಿಶೇಷ ಅರ್ಪಿಸಲಾಯಿತು. ಮಹಾಪೂಜೆಯ ನಂತರ ಪ್ರಸಾದ ವಿತರಣೆ ನೆರವೇರಿತು. ನಂತರ ಬೇಟೆಗಾರ ಅಯ್ಯಪ್ಪನ ಸೇವಕರಿಗೆ ಪೂಜೆ ನೆರವೇರಿತು.











