ಸೋಮವಾರಪೇಟೆ ಏ.28 : ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ನೂತನವಾಗಿ ಪರಿಚಯಿಸಿರುವ ಆನ್ ಲೈನ್ ಕೌಂಟರ್ ನ್ನು ಸೋಮವಾರಪೇಟೆ ತಹಸೀಲ್ದಾರ್ ನರಗುಂದ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಇನ್ನು ಮುಂದೆ ನೋಂದಣಿ ಕಚೇರಿಯಲ್ಲಿ ನಡೆಯುವ ಎಲ್ಲ ಕೆಲಸಗಳಿಗೂ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಈ ಸಂದರ್ಭ ಜಿಲ್ಲಾ ನೋಂದಣಿ ಅಧಿಕಾರಿ ಸಿದ್ದೇಶ್ , ಸೋಮವಾರಪೇಟೆ ಉಪ ನೋಂದಣಿ ಅಧಿಕಾರಿ ಬಿ.ಸಿ. ಶಿವಪ್ಪ ಮತ್ತು ಸಿಬ್ಬಂದಿ ಗಳು ಉಪಸ್ಥಿತರಿದ್ದರು.