ಮಡಿಕೇರಿ ಮೇ 12 : ವಿರಾಜಪೇಟೆ ತಾಲೂಕಿನ ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆಯೊಂದು ಪ್ರತ್ಯಕ್ಷಗೊಂಡು ಆತಂಕ ಮೂಡಿಸಿದೆ.
ಪಕ್ಕದ ಕುರುಬರಮೊಟ್ಟೆ ತೋಟದಿಂದ ಸಿದ್ಧಾಪುರ ನಗರಕ್ಕೆ ಬಂದ ಕಾಡಾನೆ ಪಟ್ಟಣದಲ್ಲಿ ಇದ್ದ ಸಾರ್ವಜನಿಕರ ಮೇಲೆ ದಾಳಿಗೆ ಮುಂದಾಗಿದ್ದು ಜನ ಚದುರಿ ಓಡಿದ್ದರಿಂದ ಯಾವುದೇ ಅನಾಹುತ ಸಂಭವಿಸಿರುವುದಿಲ್ಲ.
ನಂತರ ಅದೇ ಮಾರ್ಗದಲ್ಲಿ ಮರಳಿ ಪಕ್ಕದ ಕುರುಬರಮೊಟ್ಟೆ ತೋಟದಲ್ಲಿ ಬೀಡುಬಿಟ್ಟಿರುವುದಾಗಿ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.








