ಮಡಿಕೇರಿ ಮೇ 13 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಎ.ಎಸ್.ಪೊನ್ನಣ್ಣ ಗೆಲುವು ಸಾಧಿಸಿದ್ದಾರೆ. 20 ನೇ ಸುತ್ತಿನ ಮತ ಎಣಿಕೆಯಲ್ಲಿ ಪೊನ್ನಣ್ಣ ಅವರು 83128 ಮತಗಳನ್ನು ಗಳಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಕೆ.ಜಿ.ಬೋಪಯ್ಯ ಅವರು 78397 ಮತಗಳನ್ನು ಗಳಿಸಿ ಸೋಲು ಅನುಭವಿಸಿದ್ದಾರೆ.