ಮಡಿಕೇರಿ ಮೇ 13 : ಬಿಜೆಪಿಯ ಭದ್ರಕೋಟೆಯನ್ನು ಚಿದ್ರ ಮಾಡುವ ಮೂಲಕ ಈ ಜೋಡಿ ಕೊಡಗಿನಲ್ಲಿ ದೊಡ್ಡ ಮೋಡಿ ಮಾಡಿದೆ. ಸೋಲಿಲ್ಲದ ಸರದಾರರಿಗೆ ಸೋಲಿನ ರುಚಿ ತೋರಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯಲ್ಲಿ ಮರು ಜೀವ ನೀಡಿದ್ದಾರೆ. ಬದಲಾವಣೆಯನ್ನು ಬಯಸಿದ್ದ ಕೊಡಗಿನ ಜನ ಇಬ್ಬರು ಉತ್ಸಾಹಿ ಯುವಕರ ಕೈಹಿಡಿದು ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದ್ದಾರೆ. ಇನ್ನು ಏನಿದ್ದರೂ ನೂತನ ಶಾಸಕರುಗಳಾದ ಮಡಿಕೇರಿಯ ಡಾ.ಮಂತರ್ ಗೌಡ ಹಾಗೂ ವಿರಾಜಪೇಟೆಯ ಎ.ಎಸ್.ಪೊನ್ನಣ್ಣ ಅವರುಗಳು ಜನರ ನಿರೀಕ್ಷೆಯನ್ನು ತಲುಪಬೇಕಷ್ಟೆ.