ಮಡಿಕೇರಿ ಮೇ 15 : ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಉಜಿರೆ ಟೆಲಿಫೋನ್ ಎಕ್ಸ್ ಚೇಂಜ್ ಟವರ್ ಬಳಿ ವಾರಸುದಾರರಿಲ್ಲದ ಶವವೊಂದು ಪತ್ತೆಯಾಗಿದೆ. ಮೃತ ವ್ಯಕ್ತಿ ಕೊಡಗು ಜಿಲ್ಲೆಯ ಕುಶಾಲನಗರದವರು ಎಂದು ತಿಳಿದು ಬಂದಿದೆ.
ತಮ್ಮಯ್ಯ (55) ಎಂಬುವವರೇ ಸಾವಿಗೀಡಾದವರಾಗಿದ್ದು, ಮೃತದೇಹದ ಬಳಿ 6.65 ಲಕ್ಷ ರೂ. ಪತ್ತೆಯಾಗಿದೆ. ಇವರು ಸೌದೆ ಒಡೆದು ಜೀವನ ಸಾಗಿಸುತ್ತಿದ್ದು, ದುಡಿದ ಹಣವನ್ನು ಉಳಿತಾಯ ಮಾಡಿರಬಹುದೆಂದು ಹೇಳಲಾಗಿದೆ.
ಬಸ್ ಟಿಕೆಟ್ ಮತ್ತಿತರ ಚೀಟಿಗಳನ್ನು ಪರಿಶೀಲಿಸಿದಾಗ ತಮ್ಮಯ್ಯ ಕುಶಾಲನಗರ ಭಾಗದವರೆಂದು ತಿಳಿದು ಬಂದಿದೆ. ಬೆಳ್ತಂಗಡಿ ಪೊಲೀಸರು ಕುಶಾಲನಗರ ಮತ್ತು ಬೈಲುಕೊಪ್ಪಕ್ಕೆ ಭೇಟಿ ನೀಡಿ ಮೃತ ವ್ಯಕ್ತಿಯ ಸಂಬAಧಿಕರ ಪತ್ತೆಗೆ ಪ್ರಯತ್ನಿಸಿದರು. ಆದರೆ ಯಾರೂ ಪತ್ತೆಯಾಗದೆ ಇರುವುದರಿಂದ ತಮ್ಮಯ್ಯ ಅವರ ವಾರಸುದಾರರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯನ್ನು (08256-232093, 9480805370) ಸಂಪರ್ಕಿಸುವAತೆ ಮನವಿ ಮಾಡಿದ್ದಾರೆ.
Breaking News
- *ರಾಜಾಸೀಟು ಫಲಪುಷ್ಪ ಪ್ರದರ್ಶನದಲ್ಲಿ 22 ಅಡಿ ಎತ್ತರದ ಶ್ರೀ ಓಂಕಾರೇಶ್ವರ ದೇವಸ್ಥಾನದ ಕಲಾಕೃತಿ ಮತ್ತು 20 ಸಾವಿರ ವಿವಿಧ ಜಾತಿಯ ಹೂವುಗಳ ಆಕರ್ಷಣೆ*
- *ರಾಷ್ಟ್ರೀಯ ಹಾಕಿ ತಂಡಕ್ಕೆ ಪಿ.ಯು.ತನುಷ್ ಆಯ್ಕೆ*
- *ಹೆಬ್ಬಾಲೆ ಸರ್ಕಾರಿ ಶಾಲೆಯಲ್ಲಿ ಗಮನ ಸೆಳೆದ ಇಂಗ್ಲಿಷ್ ಭಾಷಾ ಮೇಳ*
- *”ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿ”ಗೆ ಕೃತಿಗಳ ಆಹ್ವಾನ*
- *ಮಾವಿನಹಳ್ಳ ಹಾಡಿ ಮತ್ತು ಕಟ್ಟೆ ಹಾಡಿಯ ಅರಣ್ಯ ಹಕ್ಕು ಗ್ರಾಮಸಭೆ*
- *ಬಾಳೆಲೆ : ಮಣ್ಣು ಪರೀಕ್ಷೆ ಮತ್ತು ಸಸ್ಯ ಪೋಷಕಾಂಶಗಳ ನಿರ್ವಹಣೆ ಕುರಿತು ಮಾಹಿತಿ ಕಾರ್ಯಕ್ರಮ*
- *ಜ.26 ರಂದು ಗಣರಾಜ್ಯೋತ್ಸವ ದಿನಾಚರಣೆ*
- *ದಕ್ಷಿಣ ಕೊಡಗಿನಲ್ಲಿ ಸಣ್ಣ ಕೈಗಾರಿಕಾ ಪ್ರದೇಶಾಭಿವೃದ್ಧಿ : 50 ಏಕರೆ ಭೂಮಿ ಮಂಜೂರಾತಿಗೆ ಆಪ್ ಮನವಿ*
- *ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು : 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ಕೊಡಗಿನ ವಿಶ್ವಜಿತ್ ಹಾಗೂ ಪೂಜಿತ್ ಆಯ್ಕೆ*