ಮಡಿಕೇರಿ ಮೇ 19 : ರೋಟರಿ ಮಡಿಕೇರಿ ವತಿಯಿಂದ ಜಲಸಿರಿ ಯೋಜನೆಯಡಿ ಪಾರಾಣೆ ಪ್ರೌಢಶಾಲೆಗೆ ರೂ.50 ಸಾವಿರ ಮೌಲ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಲಾಯಿತು.
ರೋಟರಿ ಮಡಿಕೇರಿ ಅಧ್ಯಕ್ಷ ಕೆ.ಸಿ.ಕಾರ್ಯಪ್ಪ, ಸಹಾಯಕ ಗವರ್ನರ್ ರತನ್ ತಮ್ಮಯ್ಯ, ರೋಟರಿಯನ್‌ಗಳಾದ ಎಂ.ಎo.ಕಾರ್ಯಪ್ಪ, ಸುರೇಶ್ ಚೆಂಗಪ್ಪ, ಪ್ರಾಂಶುಪಾಲರಾದ ರಜನಿ ಹಾಗೂ ಸಿಬ್ಬಂದಿಗಳು ಈ ಸಂದರ್ಭ ಉಪಸ್ಥಿತರಿದ್ದರು.










