ಕಡಂಗ ಮೇ 20 : ಕಳೆದ ವಾರ ಸುರಿದ ಬಾರಿ ಗಾಳಿ ಮಳೆಯಿಂದ ಕಾಕೋಟು ಪರಂಬು ಗ್ರಾ.ಪಂ ವ್ಯಾಪ್ತಿಯ ಕಲ್ಲು ಮೊಟ್ಟೆ ವಿರಾಜಪೇಟೆ ಕಡಂಗ ಮುಖ್ಯ ರಸ್ತೆಯಲ್ಲಿ ಬಿದ್ದಿದ್ದ ಭಾರೀ ಗಾತ್ರದ ಮರದ ತಂಡುಗಳು ರಸ್ತೆಬದಿಯಲ್ಲಿ ಬಿದ್ದಿದ್ದು, ವಾಹನ ಸವಾರರಿಗೆ ತೊಂದರೆ ಉಂಟಾಗಿತ್ತು. ಇದನ್ನು ಮನಗಂಡ ಕಡಂಗ ಎಸ್ ವೈ ಎಸ್, ಎಸ್ ಕೆ ಎಸ್ ಎಸ್ ಎಫ್ ಸದಸ್ಯರು ಅಲ್ಲಿದ್ದ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವುಮಾಡಿಕೊಟ್ಟರು.
ಮತಗಳ ತುಂಡುಗಳ ತೆರವಿಗೆ ಸಂಬಂಧಪಟ್ಟ ಅಧಿಕಾರಿಗಳೂ ಮತ್ತು ಕಾಕೊಟು ಗ್ರಾ.ಪಂ ಮಾಹಿತಿ ನೀಡಿದರೂ ಯಾವುದೇ ಸ್ಪಂದನೆ ದೊರೆಯದ ಕಾರಣ ಕಡಂಗ ಎಸ್ ವೈ ಎಸ್, ಎಸ್ ಕೆ ಎಸ್ ಎಸ್ ಎಫ್ ಸದಸ್ಯರೇ ತೆರವುಗೊಳಿಸಿರು. ಇವರ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಸದಸ್ಯರಾದ ಜಮಾತ್ ಅಧ್ಯಕ್ಷ ಅಬ್ದುಲ್ಲ ಝಕರಿಯ, ಇರ್ಶಾದ್ ಇಸಾಕ್, ಸಿಯಬ್ ,ಸಿದ್ದಿಕ್, ರಜಾಕ್ ಹಾರಿಸ್ ಮುಂತಾದವರು ಹಾಜರಿದ್ದರು.
ವರದಿ : ನೌಫಲ್ ಕಡಂಗ