ಮಡಿಕೇರಿ ಮೇ 20 : ಬೆಂಗಳೂರಿನ ಕೈವಲ್ಯ ಕಲಾ ಕೇಂದ್ರದಿಂದ ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಇಂದು (ಮೇ 20) ರಂದು ಮಾಧವಿ ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ.
ಸಂಜೆ 7 ಗಂಟೆಯಿಂದ 65 ನಿಮಿಷಗಳ ಕಾಲ ನಡೆಯಲಿರುವ ನಾಟಕವನ್ನು ಸುಧಾ ಅಡುಕಳ ಇವರು ರಚಿಸಿದ್ದು ಡಾ ಶ್ರೀಪಾದ ಭಟ್ಟ್ ನಿರ್ದೇಸಿರುತ್ತಾರೆ. ಈ ನಾಟಕದಲ್ಲಿ ಇಬ್ಬರು ಕಲವಿದರಾದ ಮಾಚಂಗಡ ಶರತ್ ಬೋಪಣ್ಣ ಮತ್ತು ದಿವ್ಯಶ್ರೀ ನಾಯಕ್ ಸುಳ್ಯ ಅಭಿನಯಿಸಿದ್ದಾರೆ. ಬೆಳಕು ಮತ್ತು ನಾಟಕದ ಸಹ ನಿರ್ದೇಶನವನ್ನು ಗಣೇಶ್. ಎಮ್. ಭೀಮನಕೋಣೆ ನಿರ್ವಹಿಸಿದ್ದಾರೆ.
“ಹಾಡುತ್ತದೆ ಪಂಜರದ ಹಕ್ಕಿ ಭಯ ಕಂಪಿತ ದನಿಯಲ್ಲಿ ತಿಳಿಯದ ಲೋಕದ ಬಗೆಗೆ ಹಂಬಲಿಸುವ ಲೋಕದ ಬಗೆಗೆ, ಕೇಳುತ್ತದೆ ಅದರ ದನಿ ದೂರದ ಬೆಟ್ಟಕ್ಕೆ ಯಾಕೆಂದರೆ ಅದರ ಹಾಡು ಬಿಡುಗಡೆಯ ಪಾಡು” ಜ.ನ.ತೇಜಶ್ರೀ ಅನುವಾದಿಸಿದ ಮಾಯಾ ಏಂಜಲೋ ಅವರ ಕವನದ ಸಾಲುಗಳಿವು. ಬಿಡುಗಡೆಯ ಪಾಡನ್ನು ಹಾಡುವ ಯಾರದೇ ದನಿಯಿರಲಿ ಅದು ದೂರದ ಬೆಟ್ಟಕ್ಕೂ ಕೇಳಿಸಲೇ ಬೇಕು. ಸ್ವಯಂವರವನ್ನು ಮತ್ತು ಮದುವೆಯೆಂಬ ಸಾಮಾಜಿಕ ಚೌಕಟ್ಟನ್ನು ಧಿಕ್ಕರಿಸಿ ನಡೆದ ಮೊದಲ ಹೆಣ್ಣು ಎಂದು ಪುರಾಣದಲ್ಲಿ ಗುರುತಿಸಿಕೊಂಡ ಮಾಧವಿ ಎಂಬ ಹೆಣ್ಣೊಬ್ಬಳು ತನ್ನ ಬಿಡುಗಡೆಯ ಹಾಡನ್ನು ಭಯ ಕಂಪಿತ ದನಿಯಲ್ಲಿ ಹಾಡಿದ ಕಥನ ಇಲ್ಲಿದೆ
ಟಿಕೆಟ್ ಗಾಗಿ ಮಾಚಂಗಡ ಶರತ್ – 96323 18603 ಸಂಪರ್ಕಿಸ ಬಹುದಾಗಿದೆ.