ಮಡಿಕೇರಿ ಮೇ 20 : ಮಡಿಕೇರಿ ವಿಭಾಗದ ಸೋಮವಾರಪೇಟೆ ಪ್ರಾದೇಶಿಕ ವಲಯ ವ್ಯಾಪ್ತಿಯ ಐಗೂರು ಗ್ರಾಮದ ಕಾಜೂರು ಸಸ್ಯ ಕ್ಷೇತ್ರ ಮತ್ತು ಹೆಬ್ಬಾಲೆ ಗ್ರಾಮದ ಕಣಿವೆ ಸಸ್ಯ ಕ್ಷೇತ್ರ್ರಗಳಲ್ಲಿ ಪ್ರತಿ ವರ್ಷವೂ ಆರ್‍ಎಸ್‍ಪಿಡಿ ಎಂಬ ಯೋಜನೆಯಲ್ಲಿ ವಿವಿಧ ಜಾತಿಯ ಸಸಿಗಳನ್ನು ವಿತರಿಸಲಾಗುತ್ತದೆ.
2023-24 ನೇ ಸಾಲಿನಲ್ಲೂ ಸಹ ಶ್ರೀಗಂಧ, ಹೊನ್ನೆ, ಮಾವು, ಮಹಾಗನಿ, ಬಿದಿರು, ಅತ್ತಿ, ಮತ್ತಿ, ನೇರಳೆ, ನೊಗ, ಹೆಬ್ಬೇವು, ಬಳಂಜಿ, ಗಸಗಸೆ, ಜಂಬೂನೇರಳೆ, ಕರಿಬೇವು, ಪನ್ನೇರಳೆ, ಪುನರ್ಪುಳಿ, ತೇಗ, ಸೀಬೆ, ಕಾಡುನೆಲ್ಲಿ ಮತ್ತಿತರ ಸಸಿಗಳನ್ನು ಮೇ, 22 ರಿಂದ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಗುವುದು. ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳುವುದು.
ಸಸಿಗಳನ್ನು ಪಡೆಯಲು ಫಲಾನುಭವಿಗಳು ಅರ್ಜಿ, ಸ್ಥಳದ ಆರ್‍ಟಿಸಿ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆಯ ವಿವರದ ಪ್ರತಿ, ಪಾಸ್ ಪೋರ್ಟ್ ಅಳತೆಯ 2 ಭಾವಚಿತ್ರದೊಂದಿಗೆ ನಿಗದಿತ ಶುಲ್ಕ ಭರಿಸಿ ಸಸಿ ಪಡೆದುಕೊಳ್ಳುವುದು.
ಸಸಿಗಳನ್ನು ಪಡೆಯಲು ವೈ.ಕೆ.ಜಗದೀಶ್ ಉಪ ವಲಯ ಅರಣ್ಯಧಿಕಾರಿ ಮಾದಾಪುರ ಶಾಖೆ(ಕಾಜೂರು ಸಸ್ಯ ಕ್ಷೇತ್ರ) ದೂ.ಸಂ.7349117090, ಭರಮಪ್ಪ ಬಿ.ಜಿ.ಅರಣ್ಯ ರಕ್ಷಕ ಮಾದಾಪುರ ಶಾಖೆ (ಕಾಜೂರು ಸಸ್ಯ ಕ್ಷೇತ್ರ) ದೂ.ಸಂ. 7338550361, ಭರತ್ ಎಂ.ಕೆ. ಉಪ ವಲಯ ಅರಣ್ಯಾಧಿಕಾರಿ ಹೆಬ್ಬಾಲೆ ಶಾಖೆ(ಕಣಿವೆ ಸಸ್ಯ ಕ್ಷೇತ್ರ) ದೂ.ಸಂ.9972180567, ಲೋಕೇಶ್ ಎಚ್.ಎಸ್. ಗಸ್ತು ಅರಣ್ಯ ಪಾಲಕ, ಹೆಬ್ಬಾಲೆ ಶಾಖೆ (ಕಣಿವೆ ಸಸ್ಯ ಕ್ಷೇತ್ರ )ದೂ.ಸಂ. 9483690239 ನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ವಲಯದ ವಲಯ ಅರಣ್ಯಾಧಿಕಾರಿ ಅವರು ತಿಳಿಸಿದ್ದಾರೆ.









