ಮಡಿಕೇರಿ ಮೇ 29 : ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ಬಾಳುಗೋಡು ಕೊಡವ ಸಮಾಜದ ಮೈದಾನದಲ್ಲಿ ಜೆಸಿ ನಿಸರ್ಗ ಕಪ್ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಿತು.
ಜೇಸಿ ವಲಯ 14ರ ಅಧ್ಯಕ್ಷರಾದ ಜೆಸಿ ಯಶಸ್ವಿನಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕ್ರೀಡೆಯಿಂದ ಮನಸ್ಸಿಗೆ ನೆಮ್ಮದಿ, ಏಕಾಗ್ರತೆ ಉಂಟಾಗಲಿದೆ. ಎಲೆಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸಲು ಮತ್ತು ಅವರನ್ನು ರಾಷ್ಟ್ರ ಮಟ್ಟದ ಸ್ಪರ್ಧೆಗೆ ತಯಾರು ಮಾಡಲು ಸ್ಪರ್ಧೆ ಸಹಕಾರಿ ಆಗಲಿದೆ ಎಂದು ಹೇಳಿದರು.
ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷ ಮುಕ್ಕಾಟಿರ ನೀತ್ ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯ 14ರ ನಿಕಟ ಪೂರ್ವ ಅಧ್ಯಕ್ಷ ಕುನಾಲ್ ಮಾಣಿಕ್‍ಚಂದ್, ದಾನಿಗಳಾದ ಚೇಂದ್ರಿಮಾಡ ಗಣೇಶ್ ನಂಜಪ್ಪ, ಸವಿತಾ ನಾಣಯ್ಯ, ಪೊನ್ನಿರ ಚೇತನ್ ಚಂಗಪ್ಪ, ಕೋಲತಂಡ ಬೋಪಯ್ಯ, ಕೊಲ್ಲಿರ ಬೋಪಣ್ಣ, ಪೂರ್ವ ಅಧ್ಯಕ್ಷರಾದ ಆಪಟ್ಟೀರ ಟಾಟು ಮೊಣ್ಣಪ್ಪ, ಐಪಿಪಿ ಅಪ್ಪಡೇರಂಡ ದಿನು ದೇವಯ್ಯ, ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ ಉಪಸ್ಥಿತರಿದ್ದರು.
ಸ್ಪರ್ಧೆ ವಿಜೇತರು : 0.22 ಬಂದೂಕು ವಿಭಾಗದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಬಡುವಂಡ ಸ್ಲೋಕ್ ಸುಬ್ಬಯ್ಯ ಪ್ರಥಮ, ಸಣ್ಣುವಂಡ ವಿನು ವಿಶ್ವನಾಥ್ ದ್ವಿತೀಯ, ಕೇಚಟ್ಟೀರ ಸಮನ್ ಬೆಳ್ಯಪ್ಪ ತೃತೀಯ ಬಹುಮಾನ ಗೆದ್ದುಕೊಂಡಿದ್ದಾರೆ.
12 ಬೋರ್ ಸ್ಪರ್ಧೆಯಲ್ಲಿ ವೇದಪಂಡ ಸರೀನ್ ಗಣಪತಿ ಪ್ರಥಮ, ನೆಲ್ಲೀರಾ ರಾಕೇಶ್ ದ್ವಿತೀಯ, ಕಲಿಯಂಡ ಸಜನ್ ಅಯ್ಯಪ್ಪ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಏರ್‍ಗನ್‍ನಲ್ಲಿ ಮೊಟ್ಟೆಗೆ ಗುರಿ ಇಡುವ ಸ್ಪರ್ಧೆಯಲ್ಲಿ ಪುತ್ತೇರಿರ ಕಾರ್ತಿಕ್ ಪ್ರಥಮ, ನಾಸಿರ್ ದ್ವಿತೀಯ, ಬಡುವಂಡ ಸ್ಲೋಕ್ ಸುಬ್ಬಯ್ಯ ತೃತೀಯ ಬಹುಮಾನ ಪಡೆದುಕೊಂಡರು.








