ಮಡಿಕೇರಿ ಮೇ 29 : ಐತಿಹಾಸಿಕ ಹಿನ್ನೆಲೆಯ ಬಿಳಿಗೇರಿ ಗ್ರಾಮದ ಶ್ರೀ ಅರ್ಧನಾರೀಶ್ವರ ಮತ್ತು ಶ್ರೀ ಭಗವತಿ ದೇವಾಲಯಕ್ಕೆ ತೆರಳುವ ಹಾದಿಯ ಮೇಕೇರಿಯಲ್ಲಿ ಶ್ರೀ ಕ್ಷೇತ್ರದ ನಾಮಫಲಕವನ್ನು ಅಳವಡಿಸಲಾಯಿತು.
ಮಡಿಕೇರಿಯಿಂದ ವಿರಾಜಪೇಟೆಗೆ ತೆರಳುವ ರಸ್ತೆಯ ಮೇಕೇರಿಯಲ್ಲಿ, ಬಿಳಿಗೇರಿಯ ಶ್ರೀ ಕ್ಷೇತ್ರಕ್ಕೆ ತೆರಳುವ ಹಾದಿಯಲ್ಲಿ ಬೃಹತ್ ನಾಮಫಲಕವನ್ನು ಅಳವಡಿಸಲಾಗಿದೆ.
ನಾಮಪಲಕ ಅಳವಡಿಸುವ ಸಂದರ್ಭ ಬಿಳಿಗೇರಿಯ ಶ್ರೀ ಭಗವತಿ ದೇವಾಲಯದ ಅಧ್ಯಕ್ಷರಾದ ಪರ್ಲಕೋಟಿ ಮಾಚಯ್ಯ, ತಕ್ಕರಾದ ಪುರುಷೋತ್ತಮ ರೈ, ಮಂಞೀರ ಉಮೇಶ್ ಅಪ್ಪಣ್ಣ, ದೇವಜನ ಮೋಹನ, ಪರ್ಲಕೋಟಿ ಕಾಂತ, ತುಂತಜೆ ಗಿರೀಶ್, ಕೋಟೇರ ಶರಿ, ಗುತ್ತಿಗೆದಾರರಾದ ಹೀಮೇಶ್ ಮತ್ತಿತರರು ಹಾಜರಿದ್ದರು.









