ನಾಪೋಕ್ಲು ಮೇ 31 : ಕೊಡವ ಜನಾಂಗದ ಸಂಸ್ಕೃತಿ ಮತ್ತು ಪರಂಪರೆಯನ್ನು ಯುವ ಪೀಳಿಗೆಗೆ ತಿಳಿಸುವಂತಹ ಕಾರ್ಯ ಆಗಬೇಕು ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು.
ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ನೆಲಜಿ ಫಾರ್ಮರ್ಸ್ ಡೆವಲಪ್ ಮೆಂಟ್ ಅಂಡ್ ರಿಕ್ರಿಯೆಶನ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಮೂರನೇ ವರ್ಷದ ರಾಜ್ಯಮಟ್ಟದ ಕೊಡವ ಕುಟುಂಬ ಕಪ್-“ತೆಂಗೆ ಬೊಡಿ ನಮ್ಮೆ” ಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೊಡವ ಸಂಸ್ಕೃತಿಯ ಭಾಗವಾದ ತೋಕುನಮ್ಮೆ ಇಂದು ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುತ್ತಿದೆ. ಜನಾಂಗದ ಮಂದಿ ಇದರಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ನಮ್ಮ ಮಕ್ಕಳಿಗೆ ಶಿಕ್ಷಣದ ಮಹತ್ವ ತಿಳಿಸಬೇಕು, ಹಿರಿಯರು ಕಾಪಾಡಿಕೊಂಡು ಬಂದ ತೋಟ, ಜಾಗಗಳ ರಕ್ಷಣೆಯೊಂದಿಗೆ ಶಿಕ್ಷಣಕ್ಕೂ ಆದ್ಯತೆ ನೀಡುವಂತಾಗಬೇಕು, ಆಚಾರ ವಿಚಾರಗಳ ರಕ್ಷಣೆ ಮಾಡಿ ಸಂಸ್ಕೃತಿ ಉಳಿಯುವಂತಾಗಬೇಕು ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಮುರುವಂಡ ಅಯ್ಯಪ್ಪ ಮಾತನಾಡಿ, ಕೊಡವ ಸಂಸ್ಕೃತಿಯನ್ನು ಉಳಿಸುವ ಕೆಲಸ ಆಗಬೇಕು. ಕೊಡವ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮದಾಗಿದೆ ಎಂದರು. ಬೆಂಗಳೂರಿನ ಆರ್.ಟಿ.ಒ ನಂದೇಟಿರ ಮೋಹನ್ ಸುಬ್ಬಯ್ಯ, ಗ್ರಾ.ಪಂ ಸದಸ್ಯ ಮಚ್ಚುರ ರವೀಂದ್ರ, ಮಾತನಾಡಿದರು.
ಇದಕ್ಕೂ ಮುನ್ನ ಎರಡನೇ ದಿನದ ಕಾರ್ಯಕ್ರಮವನ್ನು ತಾಮರ ಕೂರ್ಗ್ ರೆಸಾರ್ಟಿನ ಅಡ್ವೈಸರ್ ಪಾಲೆಕಂಡ ಸಾಯಿ ಕರುಂಬಯ್ಯ ಹಾಗೂ ನಿವೃತ್ತ ಕಾರ್ಪೊರೇಷನ್ ಬ್ಯಾಂಕ್ ನ ಚೀಫ್ ಮ್ಯಾನೇಜರ್ ಅಪ್ಪಾರಂಡ ಸುಧೀರ್ ಅಯ್ಯಪ್ಪ ಉದ್ಘಾಟಿಸಿದರು.
ನೆಲಜಿ ಫಾರ್ಮರ್ಸ್ ಡೆವಲಪ್ ಮೆಂಟ್ ಅಂಡ್ ರಿಕ್ರಿಯೇಷನ್ ಅಧ್ಯಕ್ಷ ಮಂಡೀರ ನಂದ ನಂಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ವಿಜಯ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಬಾಚಿರ ಅಯ್ಯಪ್ಪ, ಚೇನಂಡ ನವೀನ್ ಪೊನ್ನಪ್ಪ, ಮಾತಂಡ ಕಮಲ ಪೂರ್ಣಚ್ಚ, ಚೇನಂಡ ಪೃಥ್ವಿ, ತಾಮರ ಕೂರ್ಗ್ ಮ್ಯಾನೇಜರ್ ಕಲ್ಯಾಟಂಡ ಗಿರೀಶ್ ಸುಬ್ಬಯ್ಯ, ಕ್ಲಬ್ ನ ಮಾಜಿ ಅಧ್ಯಕ್ಷ ಮಾಳೆಯ0ಡ ಅಯ್ಯಪ್ಪ, ಚೇನಂಡ ಗಿರೀಶ್, ಮುರುವಂಡ ದಿವ್ಯ ಉಪಾಧ್ಯಕ್ಷ ಕೈಬುಲಿರ ಎಸ್.ಉಮೇಶ್ ಸಹ ಕಾರ್ಯದರ್ಶಿ ಚೀಯಕಪುಂಡ ನವೀನ್ ನಾಚಪ್ಪ, ಮಾಳೆಯಂಡ ಸಿ. ವಿಜಯ್, ಮಾಳೆಯಂಡ ಬಿಜು ಪೆಮ್ಮಯ್ಯ, ಮಾಳೆಯಂಡ ವಿಜು ಅಪ್ಪಚ್ಚ, ಅಪ್ಪುಮಣಿಯಂಡ ಕಿಶನ್ ಮೇದಪ್ಪ, ಬೊಡಿ ನಮ್ಮೆ ಸಂಚಾಲಕ ಮಾಳೆಯಂಡ ಅಪ್ಪಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.
ಚೀಯಕಪೂವಂಡ ಶ್ರೇಯ ನವೀನ್ ಪ್ರಾರ್ಥಿಸಿ, ಮಂಡೀರ ನಂದ ನಂಜಪ್ಪ ಸ್ವಾಗತಿಸಿದರು. ಮುಕ್ಕಾಟಿರ ವಿನಯ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವಿಜೇತರು :
ಕೊಡವ ಫ್ಯಾಮಿಲಿ ಕಪ್ : ಕುಪ್ಪುಡಿರ ಕುಟುಂಬ ಪ್ರಥಮ, ಚೋನಿರ ಕುಟುಂಬ ದ್ವಿತೀಯ, ಚೆಕ್ಕೇರ ಕುಟುಂಬ ತೃತೀಯ ಹಾಗೂ ಅಪ್ಪುಮಣಿಯಂಡ ಕುಟುಂಬ ನಾಲ್ಕನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿತು.
0.22 ವಿಭಾಗ : ಬಡುವಂಡ ಧನು ಪ್ರಥಮ, ಚೋನಿರ ಸಜ್ಜನ್ ದ್ವಿತೀಯ, ಚೀಯಕಪೂವಂಡ ಚೇತನ್ ತೃತೀಯ ಸ್ಥಾನ ಪಡೆದುಕೊಂಡರು.
12 ಬೋರ್ : ನೆಲ್ಲಿರ ಧನು ಪ್ರಥಮ, ಬಾಳೆಯಡ ಲಶ ದ್ವಿತೀಯ, ಕುಪ್ಪುಡಿರ ಪೊನ್ನು ಮುತ್ತಪ್ಪ ತೃತೀಯ ಸ್ಥಾನವನ್ನು ಗೆದ್ದುಕೊಂಡರು.
ಫನ್ ಗೇಮ್ಸ್ : ಪುತ್ತರಿರ ನಿಶಾಂತ್ ಪ್ರಥಮ, ಮಂಡಿರ ಶಿಶೀರ್ ದ್ವಿತೀಯ, ಬಡುವಂಡ ತ್ರಿಶಾಲಿ ತೃತೀಯ ಸ್ಥಾನ ಪಡೆದುಕೊಂಡರು.
ವಿಜೇತರಾದವರಿಗೆ ದಾನಿಗಳು ನೀಡಿದ ಟ್ರೋಫಿ ಮತ್ತು ನಗದನ್ನು ವಿತರಿಸಲಾಯಿತು.
ವರದಿ : ದುಗ್ಗಳ ಸದಾನಂದ.