ಮಡಿಕೇರಿ ಮೇ 31 : ಮಡಿಕೇರಿ ತಾಲೂಕು ಬಂಟರ ಸಂಘದ ಅಧ್ಯಕ್ಷರಾಗಿ ಬಿ.ಐ.ರಮೇಶ್ ರೈ ಪುನರಾಯ್ಕೆಯಾಗಿದ್ದಾರೆ.
ನೂತನ ಆಡಳಿತ ಮಂಡಳಿ ರಚನೆ ಸಂಬಂಧ ನಗರದ ಜಿಲ್ಲಾ ಬಂಟರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಬಿ.ಆರ್.ಸದಾಶಿವ ರೈ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಕೆ. ವಿಠಲ ರೈ, ಖಜಾಂಜಿಯಾಗಿ ಬಿ.ಬಿ. ದಿವೇಶ್ ರೈ, ಗೌರವ ಸಲಹೆಗಾರರಾಗಿ ಬಿ.ಸಿ.ಹರೀಶ್ ರೈ ಕೂಟುಹೊಳೆ ನೇಮಕಗೊಂಡಿದ್ದಾರೆ.
ನಿರ್ದೇಶಕರಾಗಿ ಶರತ್ ಕುಮಾರ್ ಶೆಟ್ಟಿ, ಗಿರೀಶ್ ರೈ ಮೂರ್ನಾಡು, ಲತೇಶ್ ಆಳ್ವ ಗಾಳಿಬೀಡು, ಶಶಿಕಲ ಲೋಕೇಶ್ ರೈ(ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ), ಯಶೋಧ ಶಂಭು ಶೆಟ್ಟಿ (ತಾಲೂಕು ಮಹಿಳಾ ಘಟಕದ ಖಜಾಂಜಿ), ಚಂದ್ರಶೇಖರ್ ರೈ (ಮೂರ್ನಾಡು ಘಟಕ ಅಧ್ಯಕ್ಷ), ಜಯಂತಿ ಲವ ರೈ (ಮೂರ್ನಾಡು ಮಹಿಳಾ ಘಟಕದ ಅಧ್ಯಕ್ಷೆ), ರಾಧಾಕೃಷ್ಣ ರೈ (ನಾಪೋಕ್ಲು ಘಟಕದ ಅಧ್ಯಕ್ಷ), ಎಂ.ಡಿ. ಸುಭಾಶ್ ಆಳ್ವ (ಗಾಳಿಬೀಡು ಘಟಕ ಅಧ್ಯಕ್ಷ), ಬಿ.ಡಿ. ಲೋಕೇಶ್ ರೈ (ತಾಳತ್ತಮನೆ ಘಟಕದ ಅಧ್ಯಕ್ಷ), ಕಮಲಾಕ್ಷಿ ರೈ (ಕಗ್ಗೋಡ್ಲು ಘಟಕ) ಹಾಗೂ ಕತ್ತಲೆಕಾಡು ಮತ್ತು ಭಾಗಮಂಡಲ ಘಟಕ ಅಧ್ಯಕ್ಷರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಪುನರಾಯ್ಕೆ ಮಾಡಲಾಗಿದೆ.









