ನಾಪೋಕ್ಲು ಮೇ 31 : ನಾಪೋಕ್ಲು ಗ್ರಾ.ಪಂ ಗೆ ಒಳಪಟ್ಟ ಬೇತು ಗ್ರಾಮದಿಂದ ಇಂದಿರಾ ನಗರಕ್ಕೆ ತೆರಳುವ ರಸ್ಥೆಗೆ ನಿರ್ಮಿಸಲಾದ ಮೋರಿ ಕುಸಿದು ಅಪಾಯಕ್ಕೆ ಅಹ್ವಾನ ನೀಡುವಂತಿದ್ದು, ಶೀಘ್ರದಲ್ಲಿ ದುರಸ್ಥಿ ಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಳೆದ ಒಂದು ವಾರದ ಹಿಂದೆಯೇ ರಸ್ತೆಯ ಮೋರಿ ಕುಸಿದಿದ್ದು, ಇದರ ಬಗ್ಗೆ ಸಂಬಂಧಪಟ್ಟ ಪಂಚಾಯಿ ಅಧಿಕಾರಿ, ಜನಪ್ರತಿನಿದಿನಗಳ ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ರಸ್ತೆಯಲ್ಲಿ ಪ್ರತಿನಿತ್ಯ ಸಾರ್ವಜನಿಕರು, ಶಾಲಾ ಮಕ್ಕಳು ಹಾಗೂ ಹಲವಾರು ವಾಹನಗಳು ಸಂಚರಿಸುತ್ತಿದ್ದು, ರಸ್ತೆಯ ಮಧ್ಯ ಭಾಗದಲ್ಲೇ ಮೋರಿ ಕುಸಿದ ಕಾರಣ ಅಪಾಯ ಸಂಭವಿಸುವ ಸಾಧ್ಯತೆ ಎಚ್ಚಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು, ಗ್ರಾಮದ ರಸ್ತೆ ಬದಿಯಲ್ಲಿ ನಿರ್ಮಿಸಲಾದ ಚರಂಡಿಗಳು ತ್ಯಾಜ್ಯ ಮತ್ತು ಮಣ್ಣುಗಳಿಂದ ತುಂಬಿಕೊಂಡಿದ್ದು ಇದರಿಂದ ಮಳೆನೀರು ರಸ್ತೆಯಲ್ಲೇ ಪ್ರವಾಹದಂತೆ ಹರಿಯುವಂತ್ತಾಗಿದೆ.
ಇದರಿಂದ ರಸ್ತೆಯಲ್ಲಿ ಪಾದಾಚಾರಿಗಳು, ಶಾಲಾಮಕ್ಕಳು ನಡೆದಾಡಲು ಬವಣೆ ಪಡುವ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಆದ್ದರಿಂದ ಸಂಬಂಧಪಟ್ಟ ಪಂಚಾಯಿಯವರು ಕೂಡಲೇ ಈ ರಸ್ತೆಯಲ್ಲಿ ಕುಸಿದಿರುವ ಮೋರಿಯನ್ನು ದುರಸ್ಥಿ ಪಡಿಸಬೇಕು, ಅದರಂತೆ ಗ್ರಾಮದ ರಸ್ತೆಗಳ ಬದಿಯಲ್ಲಿರುವ ಚರಂಡಿಗಗಳನ್ನು ಸ್ವಚ್ಛಗೋಳಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.