ಮಡಿಕೇರಿ ಜೂ.6 : ವಿರಾಜಪೇಟೆ ವಿಧಾನಸಭಾಕ್ಷೇತ್ರದ ನೂತನ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರನ್ನು ಕೊಡಗು ಜಿಲ್ಲಾ ಬಂಟರ ಸಂಘದ ವತಿಯಿಂದ ಅಭಿನಂದಿಸಲಾಯಿತು.
ವಿರಾಜಪೇಟೆಯ ನಿವಾಸದಲ್ಲಿ ಭೇಟಿಯಾದ ಅಧ್ಯಕ್ಷ ಬಿ.ಡಿ. ಜಗದೀಶ್‍ರೈ ಮತ್ತು ಪದಾಧಿಕಾರಿಗಳು ಕರಾವಳಿಯ ಕಲೆ ಯಕ್ಷಗಾನ ಕಿರೀಟದ ಪ್ರತಿರೂಪವನ್ನು ನೀಡಿ ಶುಭ ಹಾರೈಸಿದರು. ಸಂಘದ ಪ್ರಮುಖ ಬೇಡಿಕೆಯುಳ್ಳ ಮನವಿ ಪತ್ರವನ್ನು ಶಾಸಕರಿಗೆ ನೀಡಲಾಯಿತು.
ಸಮುದಾಯದ ಬೆಳವಣಿಗೆ ಜತೆಗೆಎಲ್ಲಾ ವರ್ಗದವರನ್ನು ಜತೆ ಸೇರಿಸಿಕೊಂಡು ಪಕ್ಷಾತೀತವಾಗಿಕಾರ್ಯ ನಿರ್ವಹಿಸುವಂತೆ ಪೊನ್ನಣ್ಣ ಸಲಹೆ ನೀಡಿದರು. ಜಿಲ್ಲಾ ಸಹಕಾರ್ಯದರ್ಶಿ ಮನೋಜ್ ಶೆಟ್ಟಿ, ನಿರ್ದೇಶಕರಾದ ಬಾಲಕೃಷ್ಣ (ಅಪ್ಪು) ರೈ, ಸತೀಶ್‍ರೈ ಫಾರೆಸ್ಟ್ ವ್ಯಾಲಿ, ಪ್ರಭುರೈ, ವಿರಾಜಪೇಟೆತಾಲೂಕುಅಧ್ಯಕ್ಷ ಲೀಲಾಧರರೈ ನೀಲುಮಾಡು, ಉಪಾಧ್ಯಕ್ಷ ಪ್ರಕಾಶ್‍ರೈ, ಕಾರ್ಯದರ್ಶಿ ಸಂಪತ್‍ಕುಮಾರ್ ಶೆಟ್ಟಿ, ಜಂಟಿ ಕಾರ್ಯದರ್ಶಿ ನೀತರೈ, ಸದಸ್ಯರಾದಜಗನ್ನಾಥರೈ ಈ ಸಂದರ್ಭ ಹಾಜರಿದ್ದರು.









