ನಾಪೋಕ್ಲು ಜೂ.8 : ಅಖಿಲ ಕೊಡವ ಸಮಾಜದ ವತಿಯಿಂದ ಜೂ.10 ರಂದು ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದೆ.
ಅಂದು ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ವಿರಾಜಪೇಟೆ ವಿಧಾನ ಸಭಾ ಸದಸ್ಯರು ಮತ್ತು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ, ವಿರಾಜಪೇಟೆಯ ಕಾವೇರಿ ಆಶ್ರಮದ ಆಧ್ಯಾತ್ಮಿಕ ಸಾಧಕ ಶ್ರೀ ವಿವೇಕಾನಂದ ಶರಣ ಸ್ವಾಮಿ, ಜಾನಪದ ಕಲಾವಿದ ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ, ಹೆಸರಾಂತ ಹಿರಿಯ ಅಂತರರಾಷ್ಟ್ರೀಯ ಅಥ್ಲೀಟ್ ಸಹೋದರರಾದ ಪಾಲೆಕಂಡ ಬೋಪಯ್ಯ ಮತ್ತು ಪಾಲೇಕಂಡ ಬೆಳ್ಳಿಯಪ್ಪ, ಅಂತರರಾಷ್ಟ್ರೀಯ ಮಾಸ್ಟರ್ಸ್ ಅಥ್ಲೀಟ್ ಮಾರಮಾಡ ಮಾಚಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದು ಅಖಿಲ ಕೊಡವ ಸಮಾಜ ಪ್ರಕಟಣೆಯಲ್ಲಿ ತಿಳಿಸಿದೆ.
ವರದಿ : ದುಗ್ಗಳ ಸದಾನಂದ









