ಮಡಿಕೇರಿ ಜೂ.8 : ಎಸ್.ಕೆ.ಎಸ್.ಎಸ್.ಎಫ್ ಕಂಡಕರೆ ಯೂನಿಟ್ ವತಿಯಿಂದ ಕಂಡಕರೆಯ ಹಯಾತುಲ್ ಇಸ್ಲಾಂ ಮದರಸದ ಆವರಣದಲ್ಲಿ ಮಜ್ಲಿಸುನ್ನೂರ್ ಮೊದಲನೇ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯಿತು.
ಮಜ್ಲಿಸುನ್ನೂರ್ ನೇತೃತ್ವ ವಹಿಸಿ ಮಾತನಾಡಿದ, ಹಾಫಿಳ್ ಸಯ್ಯಿದ್ ಅಬ್ದುಲ್ ಖಾದಿರಿ ಪಟ್ಟಾಂಬಿ, ಮನಸ್ಸು ಶುದ್ಧೀಕರಣಗೊಳಿಸಿದರೆ ಮಾತ್ರ, ನಾವು ಮಾಡುವ ಆರಾಧನಾ ಕರ್ಮಗಳು
ಸ್ವೀಕಾರಾರ್ಹವಾಗುವುದು.
ಮನುಷ್ಯರು ಮನಸ್ಸಿನಲ್ಲಿ, ದ್ವೇಷ,ಅಸೂಯೆಯನ್ನು ತ್ಯಜಿಸಿ ದೇವರಿಗೆ ಹತ್ತಿರವಾಗಿ ಬಡವರಿಗೆ ಸಹಾಯ ಹಸ್ತ ನೀಡಬೇಕಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ನಾಯಿಬ್ ಖಾಝಿ ಅಬ್ದುಲ್ಲ ಫೈಜಿ ಎಡಪಲಾ ಹಾಗೂ ಕಂಡಕರೆ ಮಹಲ್ ಖತೀಬ್ ಮುಸ್ತಫಾ ಸಖಾಫಿ ಶುಭಕೋರಿದರು.
ಎಸ್.ಕೆ.ಎಸ್.ಎಸ್.ಎಫ್ ಕಂಡಕರೆ ಯೂನಿಟ್ ವತಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಕಂಡಕರೆಯ ವಿದ್ಯಾರ್ಥಿ ಸಿ.ಎಂ.ಮುಜಮ್ಮಿಲ್ ಅವರಿಗೆ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಯಿತು.
ಅದೇ ರೀತಿಯಲ್ಲಿ ಹಾಫಿಳ್ ಸಯ್ಯಿದ್ ಅಬ್ದುಲ್ ಖಾದಿರಿ ಫೈಜಿ ಪಟ್ಟಾಂಬಿ, ಅಬ್ದುಲ್ಲಾ ಫೈಜಿ ಹಾಗೂ ಮುಸ್ತಫಾ ಸಖಾಫಿ ಅವರನ್ನು ಎಸ್.ಕೆ.ಎಸ್.ಎಸ್.ಎಫ್ ಕಂಡಕರೆ ಯೂನಿಟ್ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.
ಚೆಟ್ಟಳ್ಳಿ ಪೊಲೀಸ್ ಠಾಣಾಧಿಕಾರಿಗಳು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.
ವೇದಿಕೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್ ಕಂಡಕರೆ ಯೂನಿಟ್ ಅಧ್ಯಕ್ಷ ಮೊಹಮ್ಮದ್ ಕೆ.,ಕಾರ್ಯದರ್ಶಿ ಹಾರಿಸ್ ಬಾಖವಿ,ಶಾಫಿ ಮುಸ್ಲಿಯಾರ್,ಸಿದ್ದೀಖ್ ಮುಸ್ಲಿಯಾರ್,ಹುಸೈನ್ ಮುಸ್ಲಿಯಾರ್,ಕಂಡಕರೆ ಮಹಲ್ ಕಮಿಟಿ ಅಧ್ಯಕ್ಷರಾದ ಗಫೂರ್, ಕಾರ್ಯದರ್ಶಿ ಮೊಹಮ್ಮದ್ ರಫಿ,ಇಕ್ಬಾಲ್ ಮುಸ್ಲಿಯಾರ್,ಆರಿಫ್ ಫೈಝಿ, ಮುಸ್ತಫಾ ಮುಸ್ಲಿಯಾರ್, ತೌಫೀಖ್ ದಾರಿಮಿ,ರಫೀಕ್ ದಾರಿಮಿ,ಉಮ್ಮರ್ ಫೈಝಿ,ಹನೀಫ್ ಫೈಜಿ,ಮುಹಮ್ಮದ್ ಫೈಜಿ, ನೌಫಲ್ ಮಹ್ಳರಿ,ಹನೀಫ ಮುಸ್ಲಿಯಾರ್ ಹಾಗೂ ಕಂಡಕರೆ ಎಸ್.ಕೆ.ಎಸ್.ಎಸ್.ಎಫ್ ಯೂನಿಟ್ ಸದಸ್ಯರು ಹಾಜರಿದ್ದರು.