ವಿರಾಜಪೇಟೆ ಜೂ.8 : ಬೇಟೋಳಿ ಗ್ರಾ.ಪಂ ವತಿಯಿಂದ ಗ್ರಾಮಾಭಿವೃದ್ಧಿ ಯೋಜನೆ ಅನುದಾನದಿಂದ ಬೇಟೋಳಿ ಒಂದನೇ ವಾರ್ಡಿನ ರಾಮನಗರ- ಪಾಕೋಡು ರಸ್ತೆಯ ಅಗಲೀಕರಣ ಕಾರ್ಯ ನಡೆಯಿತು.
ಸ್ಥಳೀಯ ತೋಟದ ಮಾಲೀಕರ ಸಹಕಾರದಿಂದ ಸಂಚಾರಕ್ಕೆ ಇಕ್ಕಟ್ಟಾಗಿದ್ದ ರಾಮನಗರದಿಂದ ಕಂಬಂಡ ಐನ್ ಮನೆವರೆಗಿನ ರಸ್ತೆಯನ್ನು ಅಗಲೀಕರಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ಈ ಸಂದರ್ಭ ಬೇಟೋಳಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಣಿ, ಗ್ರಾ.ಪಂ ಅಧ್ಯಕ್ಷೆ ಯಶೋಧ, ಸದಸ್ಯರಾದ ಅಮ್ಮಣಕುಟ್ಟಂಡ ಕಟ್ಟಿ, ರಜಾಕ್ ಹಾಗೂ ಗುತ್ತಿಗೆದಾರರಾದ ಪಟ್ಟಡ ಮನು ರಾಮಚಂದ್ರ, ಗ್ರಾಮಸ್ಥರಾದ ಬಿ.ಕೆ. ವಿಶ್ವನಾಥ್ ಹಾಗೂ ತೋಟದ ಮಾಲೀಕರು, ಸ್ಥಳೀಯರು ಹಾಜರಿದ್ದರು.









