ಮಡಿಕೇರಿ ಜೂ.10 : ಕೊಡಗು ವಿಶ್ವ ವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗದ ವತಿಯಿಂದ ಪೊನ್ನಂಪೇಟೆ ತಾಲೂಕಿನ ಕೋತೂರು ಆಶ್ರಮ ಶಾಲೆಯಲ್ಲಿ ಹಮ್ಮಿಕೊಂಡಿರುವ ಗ್ರಾಮೀಣ ಅಧ್ಯಯನ ಶಿಬಿರದ ನಾಲ್ಕನೇ ದಿನ ವಿರಾಜಪೇಟೆಯ ಕೊಡಗು ದಂತ ಮಹಾ ವಿದ್ಯಾಲಯದ ಸಹಯೋಗದಲ್ಲಿ ದಂತ ಉಚಿತ ತಪಾಸಣೆ ಶಿಬಿರ ನಡೆಯಿತು.
ಬೊಮ್ಮಾಡು ಹಾಡಿಯ ನಿವಾಸಿಗಳಿಗೆ ಹಾಗೂ ಕೋತೂರು ವಾಲ್ಮೀಕಿ ಗಿರಿಜನ ಆಶ್ರಮ ಶಾಲೆಯ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮವನ್ನು ಸಿಗ್ಮಾ ನೆಟ್ ವರ್ಕ್ ನ ಸಂಸ್ಥಾಪಕರು, ಉದ್ಯಮಿ ಹಾಗೂ ಜಿಲ್ಲೆಯ ಯುವ ಮುಖಂಡರೂ ಚರಣ್ ಪೂಣಚ್ಚ ಉದ್ಘಾಟಿಸಿ ಮಾತನಾಡಿ “ಉತ್ತಮ ಆರೋಗ್ಯ ಮತ್ತು ಶಿಕ್ಷಣ ಎರಡೂ ಜೀವನದ ಎರಡು ಪ್ರಮುಖ ಅಗತ್ಯಗಳಾಗಿದೆ. ಶಿಕ್ಷಣ ಇದ್ದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಉತ್ತಮ ಆರೋಗ್ಯ ಇದ್ದರೆ ಮಾತ್ರ ಶಿಕ್ಷಣ ಪಡೆಯಬಹುದು. ಹಾಗಾಗಿ ಇವೆರಡೂ ಪರಸ್ಪರ ಅವಲಂಬಿತವಾಗಿದ್ದು, ಈ ಎರಡೂ ಅಂಶಗಳಿಂದ ವಂಚಿತ ಸಮುದಾಯಕ್ಕೆ ಇಂತಹ ಶಿಬಿರಗಳು ಅಗತ್ಯವಿದೆ. ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಮತ್ತು ಆರೋಗ್ಯ ನೀಡಿದರೆ ಮಾತ್ರ ದೇಶದ ಅಭಿವೃದ್ಧಿಯು ಸಾಧ್ಯ” ಎಂದು ತಿಳಿಸಿದರು.
ನಂತರ ಕೊಡಗು ದಂತ ಮಹಾವಿದ್ಯಾಲಯದ ಸಮುದಾಯ ದಂತ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿತೇಶ್ ಜೈನ್ ರವರು ವಿದ್ಯಾರ್ಥಿಗಳಿಗೆ ಹಾಗೂ ಹಾಡಿಯ ನಿವಾಸಿಗಳಿಗೆ ‘ದಂತ ಆರೋಗ್ಯದ ಬಗ್ಗೆ ಅರಿವು’ ಎಂಬ
ವಿಷಯದ ಕುರಿತ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪೃಥ್ವಿ ಉತ್ತಯ್ಯ, ಆಶ್ರಮ ಶಾಲೆಯ ಶಿಕ್ಷಕರಾದ ಆರತಿ, ಕೊಡಗು ವಿಶ್ವವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗದ ಉಪನ್ಯಾಸಕರಾದ ರಾಬಿನ್ ಕೆ ಜೆ, ಲೋಕೇಶ್ ಭರಣಿ ಎಂ. ಎನ್, ಹಾಗು ಆಶ್ರಮ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಕೆ.ಹರಿಣಾಕ್ಷಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಸಮಾಜಕಾರ್ಯ ಶಿಬಿರಾರ್ಥಿಗಳು, ಆಶ್ರಮ ಶಾಲೆಯ ವಿದ್ಯಾರ್ಥಿಗಳು ಹಾಗೂ ಹಾಡಿಯ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ವಿರಾಜಪೇಟೆಯ ದಂತ ಮಹಾವಿದ್ಯಾಲಯದ ವೈದ್ಯರ ತಂಡವು ನೂರಕ್ಕೂ ಅಧಿಕ ಜನರ ದಂತ ತಪಾಸಣೆಯನ್ನು ಮಾಡಿದರು.








